Inauguration of “PRE-CONFERENCE WORKSHOP” ISGCT/IHBT – 2019

DR. AGARWAL HOSPITALS & GENE RESEARCH FOUNDATION/IMMUNOHEMATOLOGY OF BLOOD TRANSFUSION-VICTORIA HOSPITALS Inaugurated “PRE-CONFERENCE WORKSHOP” today and are conducting the 3rd ISGCT 2019 convention under the aegis of RAJIV GANDHI UNIVERSITY OF HEALTH SCIENCES, INDIAN COUNCIL FOR MEDICAL RESEARCH, NIMHANS and with BANGALORE MEDICAL COLLEGE from NOVEMBER 10th to 12th 2019.

Through this convention there wil be workshops, wetlabs, didactic lectures, symposiums and panel discussions on various aspects of the budding field of medicine STEM CELLS and GENETIC ENGINEERING in one word MEDICAL GENOMICS. Sessions discussed will be GENETICS UNDERSTANDING OF COMPLEX DISEASES, PERSONALIZED MEDICINE TRANSLATIONAL APPLICATION CLINICAL DIAGNOSTICS CELLS AND MOLECULAR AND APPLICATIONS SURGICAL OF STEM REGENERATIVE MEDICINE, GUIDELINES FOR STEM CELLS AND GENE THERAPY.

Scientists and doctors from all over the world will fly down for this 3 day extravaganza to partake in the arena where DNA becomes the diagnostic tool through next gen sequencing we are able to diagnose just about everything. Thus it hasS also become a treatment tool where we take one drop of the patient’s blood give back the patients own fetal DNA and fetal stem cells by mixing it with MORPHOGENETIC ACTIVATOR OF NUCLEIC ACIDS (MANA) and re injecting the patient. This also becomes an immune booster and thus a regenerative tool.

CHIEF GUEST:

DR. JITENDRA SINGH

HON’BLE MINISTER OF STATE FOR PRIME MINISTER’S OFFICE NEW DELHI

HON’BLE DR. HEENA GAWIT

MEMBER OF LOK SABHA MAHARASTRA

INTERNATIONAL FACULTIES: DR (NETHERLANDS) ANDREW CHANG (CARL ZEISS) GERMANY, AMINA AKTHAR (GERMANY), DR. AURELIE JORY LILY (USA) LARRY CHROMWELL (USA), DR. B.W BORIS KRAMER DR. CHRIS MURGATROYD (UNITED KINGDOM), MR.ANDREW CHANG (CARL ZEISS) GERMANY,AMINA AKTHAR (GERMANY) DR.AURELIE JORY LILY (USA)

City Today News

(citytoday.media)

9341997946

ನವದೆಹಲಿಯ ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಹುತಾತ್ಮರನ್ನು ಗೌರವಿಸುವ ಕಾರ್ಯಕ್ರಮ

ನವದೆಹಲಿಯ ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಹುತಾತ್ಮರನ್ನು  ಗೌರವಿಸುವ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಎಡಿಜಿಪಿ ಪಿ.ಎಸ್.ಸಂಧು, ಕೆಎಸ್ಆರ್ ಪಿ, ಎಡಿಜಿಪಿ ಅಲೋಕು ಕುಮಾರ್, ರಾಷ್ಟ್ರೀಯ ಭದ್ರತಾ ದಳದ, ಡಿಐಜಿ ಶ್ರೀಮತಿ ಸೋನಿಯಾ ನಾರಂಗ್, ಸಿಬಿಐ ನ ನಿವೃತ್ತಿ ಮಹಾನಿರ್ದೇಶಕ ಶ್ರೀ ಕಾರ್ತಿಕೇಯನ್ ಉಪಸ್ಥಿತರಿದ್ದರು.  ಕಮಾಡೆಂಟ್ ರಾಮಕೃಷ್ಣ ಪ್ರಸಾದ್ ನೇತೃತ್ವದಲ್ಲಿ ಕೆಎಸ್ಆರ್ಪಿ ಯ 3ನೇ ಪಡೆಯ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

Sacrifice made by the police was recollected at National Police Memorial in Chanakhapuri in New Delhi. Smt.Neelamani Raju, Director General of Police, Shri.PS Sandhu, ADGP, Shri.Alok Kumar, KSRP, ADGP, Mrs Sonia Narang, National Security Force DIG and Retired Director General of the CBI Mr. Karthikeyan were present. Commandant Ramakrishna Prasad of KSRP third batallion participated in it. 

City Today News

(citytoday.media)

9341997936

ಡಿಸೆಂಬರ್ 11 , 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸೋಣ-MRHS

ಡಿಸೆಂಬರ್ 11 , 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸೋಣ . ನಾವು ರಾಜಕೀಯವಾಗಿ ಬಹುಸಂಖ್ಯಾತರು ಮತ್ತು ಶಕ್ತಿಯುಳ್ಳವರು . ನಾವು ಅಂಗಲಾಚಿ ಬೇಡುವವರಲ್ಲ . ನಮ್ಮ ಹಕ್ಕಾದ ಒಳಮೀಸಲಾತಿಯನ್ನು ಜಾರಿಗೊಳಿಸಲು ಐಕ್ಯತೆಯಿಂದ ಒಂದಾಗಿ ಹೋರಾಡೋಣ .

1 ) ಒಳಮೀಸಲಾತಿ ಹೋರಾಟ ರಾಜಕೀಯ ಸಮಸ್ಯೆಯಾಗಿ ರೂಪುಗೊಂಡಿದೆ . ರಾಜಕೀಯ | ಹೋರಾಟವನ್ನು ರಾಜಕೀಯವಾಗಿಯೇ ಪರಿಗಣಿಸಿ ಅದಕ್ಕೆ ರಾಜಕೀಯವಾಗಿ ಪರಿಷ್ಕಾರವನ್ನು ಕಂಡುಕೊಳ್ಳಬೇಕು .

2 ) ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ಸೌಲಭ್ಯಗಳ ಹಂಚಿಕೆಯಲ್ಲಾದ ತಾರತಮ್ಯವನ್ನು ನಿವಾರಿಸಲು ಎಲ್ಲಾ ಜಾತಿಗಳಿಗೂ ಜನಸಂಖ್ಯೆಗಳಿಗನುಗುಣವಾಗಿ ರಾಜಕೀಯ , ಆರ್ಥಿಕ ಸೌಲಭ್ಯಗಳನ್ನು ಹಂಚುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಜೂನ್ – 14 2012 ರಂದು ನ್ಯಾ . ಎ . ಜೆ . ಸದಾಶಿವ ರವರು ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು . 11 – 12 – 2012 ರಂದು ಈ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧವನ್ನು ಮುತ್ತಿಗೆ ಹಾಕಲಾಯಿತು . ಅಂದಿನ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ಜನರ ಮೇಲೆ ಲಾಟಿ ಪ್ರಯೋಗ ಮಾಡಿಸಿ ತಲೆ ಬುರುಡೆಗಳನ್ನು ಕೈ ಕಾಲುಗಳನ್ನು ಮುರಿಯುವಂತೆ ಹೊಡೆದು ಬಂಧಿಸಿ ಕೇಸ್‌ಗಳನ್ನು ಹಾಕಲಾಯಿತು . 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲುಂಡಿತು .

3 ) 11 – 12 – 2016 ರಂದು ಹುಬ್ಬಳ್ಳಿಯಲ್ಲಿ ಐತಿಹಾಸಿಕವಾಗಿ 5 ಲಕ್ಷಕ್ಕಿಂತ ಹೆಚ್ಚಿನ ಜನ ಒಳಮೀಸಲಾತಿಗಾಗಿ ಒತ್ತಾಯಿಸಿ ಸಮಾವೇಶಗೊಂಡಾಗ ಈ ಸಮಾವೇಶಕ್ಕೆ ಬರುತ್ತಿದ್ದ 7 ಜನ ಹುತಾತ್ಮರಾದರು . ಮಾನ್ಯ ಸಿದ್ದರಾಮಯ್ಯನವರು ಒಳ ಮೀಸಲು ವರದಿಯನ್ನು ನಿರ್ಲಕ್ಷ್ಯ ಮಾಡಿದ್ದರಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡಿತು . ಸಮ್ಮಿಶ್ರ ಸರ್ಕಾರ ಉದಯವಾಯಿತು . 14 ತಿಂಗಳು ಗತಿಸಿದ್ದರೂ ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ಸಮ್ಮಿಶ್ರ ಸರ್ಕಾರವು ಒಳಮೀಸಲು ಹೋರಾಟಕ್ಕೆ ಬೆಂಬಲ ನೀಡಲಿಲ್ಲ .

4 ) ಮಾನ್ಯ ಪತ್ರಕರ್ತ ಮಿತ್ರರೇ 2004 ರಿಂದ ಇಲ್ಲಿಯವರೆವಿಗೂ ಎಲ್ಲಾ ಚುನಾವಣೆಗಳಲ್ಲೂ ಕೂಡ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ನಿರ್ಲಕ್ಷ್ಯ ಮಾಡಿದ ಆಡಳಿತ ಸರ್ಕಾರಗಳು ಮಾದಿಗರ ಶಾಪಕ್ಕೆ ಗುರಿಯಾಗಿ ಅಧಿಕಾರವನ್ನು ಕಳೆದುಕೊಂಡಿವೆ .

5 ) ಡಿಸೆಂಬರ್ 2019 ರಲ್ಲಿ ನಡೆಯುವ ಉಪಚುನಾವಣೆಗೆ ಮುಂಚೆ ಅಂದರೆ ನೀತಿ ಸಂಹಿತ ಜಾರಿಯಾಗುವುದಕ್ಕಿಂತ ಪೂರ್ವದಲ್ಲಿ ರಾಜ್ಯ ಸರಕಾರದ ಆಡಳಿತ ಪಕ್ಷವಾದ ಬಿ . ಜೆ . ಪಿಯು ನ್ಯಾ . ಎ . ಜೆ . ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ತನ್ನ ಅಭಿಪ್ರಾಯ ಸ್ಪಷ್ಟಪಡಿಸಬೇಕು . ಇಲ್ಲದಿದ್ದರೆ ಮುಂದೆ ಬರುವ 15 ಕ್ಷೇತ್ರದ ಉಪಚುನಾವಣೆಯಲ್ಲಿ ಪರಿಶಿಷ್ಟರೇ ಬಹುಸಂಖ್ಯಾತರಾದ ಮಾದಿಗರು ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಮತ್ತು ಯಾವ ಅಭ್ಯರ್ಥಿಯು ಮಾದಿಗರ ಸಮಸ್ಯೆಗೆ ಬೆಂಬಲಿಸುತ್ತಾರೋ ಅವರಿಗೆ ಮಾತ್ರ ನಮ್ಮ ಬೆಂಬಲವೆಂದು ಆಡಳಿತ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ .

6 ) ಮಾದಿಗ ಮೀಸಲಾತಿ ಹೋರಾಟ ಸಮಿತಿ ( ಸಂಸ್ಥಾಪಕ ಸಮಿತಿ ) ಡಿಸೆಂಬರ್ 11 ಪ್ರಹಾರವನ್ನು ಪ್ರತೀ ವರ್ಷ ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ . 2019 ರಲ್ಲಿ 7ನೇ ವರ್ಷದ ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ . 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು , ಹಿತೈಷಿಗಳು , ವಿದ್ಯಾರ್ಥಿ , ಚಿಂತಕರು ಮತ್ತು ವಿವಿಧ ಸಂಘಟನೆಗಳಲ್ಲಿ ಶ್ರಮಿಸುತ್ತಿರುವ ಮತ್ತು ಸಮ ಸಮಾಜಕ್ಕಾಗಿ ಹಂಬಲಿಸುತ್ತಿರುವವರು ಈ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕೋರುತ್ತೇವೆ .

7 ) ಬಿಜಾಪುರ ಜಿಲ್ಲೆಯ ರೇಣುಕ ಮಾದರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಹಾಗೂ ಬಾಗಲಕೋಟ ಜಿಲ್ಲೆಯ ಮುದೋಳ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ದಲಿತರ ಜೋಡಿ ಕೊಲೆ ಪ್ರಕರಣವನ್ನು ರಾಜ್ಯ ಸಮಿತಿಯು ತೀವ್ರ ಖಂಡಿಸುತ್ತದೆ . ಈ ಘಟನೆಗೆ ಕಾರಣರಾದ ಆರೋಪಿಗಳನ್ನು ರಾಜ್ಯ ಸರ್ಕಾರವು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತದೆ ಹಾಗೂ ರಾಜ್ಯ ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಾತಿ ಜನಾಂಗಗಳ ಮಧ್ಯೆ ಮೌಡ್ಯತೆಯನ್ನು ನಿರ್ನಾಮ ಮಾಡಬೇಕು ಎಂದು ಒತ್ತಾಯಿಸುತ್ತೇವೆ .

8 ) ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದ ರಮೇಶ್ ಮಾದರ ( 29 ವರ್ಷ ) ಹಾಗೂ ಗಂಗಮ್ಮ ರಾಥೋಡ್ ( 23 ವರ್ಷ ) ಇವರಿಬ್ಬರನ್ನು ಬುಧವಾರ ಮಧ್ಯಾಹ್ನ ಮನೆಗೆ ನುಗ್ಗಿ ಏಕಾಏಕಿ ಗಂಗಮ್ಮನ ಸಹೋದರರಾದ ರವಿ , ರಮೇಶ್ ಹಾಗೂ ಶಿವು ರಾಥೋಡ್ ಮತ್ತು ಇತರರು ಸೇರಿಕೊಂಡು ಬರ್ಭರವಾಗಿ ಕೊಲೆ ಮಾಡಿದ್ದಾರೆ . ಕೊಲೆಯಾದ ರಮೇಶ್ ಹಾಗೂ ಗಂಗಮ್ಮ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ . ಮೂರು ವರ್ಷದ ಅನಿಲ್ ಹಾಗೂ ಎರಡು ತಿಂಗಳ ಹಸುಗೂಸು ಅರ್ಜುನ , ಅವರಿಗೆ ಲೋಕಜ್ಞಾನವೂ ಇಲ್ಲ . ಅಂತರಜಾತಿಯ ಮಾಹಿತಿಯೂ ಇಲ್ಲ . ಇವರಿಬ್ಬರೂ ತಂದೆ – ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದು , ಘಟನೆಯ ಅರಿವಿಲ್ಲದೆ ರೋಧಿಸುತ್ತಿದ್ದಾರೆ . ಈ ಮರ್ಯಾದೆ ಹತ್ಯೆಯನ್ನು ನಮ್ಮ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ . ಗಜೇಂದ್ರಗಡ ಪೊಲೀಸ್ ಅಧಿಕಾರಿಗಳು ಕೇವಲ ಇಬ್ಬರನ್ನು ಮಾತ್ರ ಬಂಧಿಸಿರುತ್ತಾರೆ . ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸುತ್ತೇವೆ ಹಾಗೂ ಈ ಇಬ್ಬರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಹೊರೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕೆಂದು ಮತ್ತು ರೂ ಐವತ್ತು ಲಕ್ಷಗಳನ್ನು ಪರಿಹಾರದ ಹಣವಾಗಿ ನೀಡಬೇಕೆಂದು ಒತ್ತಾಯಿಸುತ್ತೇವೆ .

– ಮಾದಿಗ ಮೀಸಲಾತಿ ಹೋರಾಟ ಸಮಿತಿ ( MRHS ) ( ಸಂಸ್ಥಾಪಕ ) ರಾಜ್ಯ ಸಮಿತಿ , ಬೆಂಗಳೂರು

ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದವರುಗಳು

ರಾಜ್ಯ ಗೌರವಾಧ್ಯಕ್ಷರು – ಎಸ್ . ಮಾರೆಪ್ಪ, ರಾಜ್ಯ ಕಾರ್ಯಾಧ್ಯಕ್ಷರು – ಕೇಶವಮೂರ್ತಿ ಬಿ . ಎ, ರಾಜ್ಯಾಧ್ಯಕ್ಷರು – ಪರಶುರಾಮ್ ಮಾರೆಗುದ್ದಿ, ರಾಜ್ಯ ಉಪಾಧ್ಯಕ್ಷರು – ಕಂಬಣ್ಣನವರ್, ರಾಜ್ಯ ಪ್ರ. ಕಾರ್ಯದರ್ಶಿ – ಶಿವರಾಯ ಅಕ್ಕರಕಿ, ರಾಜ್ಯ ಕಾರ್ಯದರ್ಶಿ – ಭಾನುಪ್ರಸಾದ್, ರಾಜ್ಯ ಕಾರ್ಯದರ್ಶಿ – ಮಾಗಡಿ ಕೃಷ್ಣ, ಬೆಳಗಾಂ ವಿ . ರಾಜ್ಯ ಕಾರ್ಯದರ್ಶಿ – ಸೋಮು ಚೂರಿ ಮತ್ತು ಪ್ರಧಾನ ಕಾರ್ಯದರ್ಶಿಗಳು – ಮೂರ್ತಿ.ಎನ್.

City Today News

(citytoday.media)

9341997936

ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಪರಿಸರ ಪ್ರಜ್ಞೆಯ ಸಂಶೋಧನೆ ಚಾಲಿತ ಶಿಕ್ಷಣ ಮತ್ತು ಸಹಯೋಗಗಳಿಗೆ ಒತ್ತು ನೀಡುವ ವಾಸ್ತುಶಿಲ್ಪ ಶಿಕ್ಷಣಕ್ಕೆ ಬಿಎಂಎಸ್ಎಸ್ಎ ಹೊಸ ವಿಧಾನವನ್ನು ತಿಳಿಸುತ್ತದೆ.


ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಯೆಲಹಂಕ ದಿ ಬಿಎಂ ಶ್ರೀನಿವಾಸಯ್ಯ ಎಜುಕೇಷನಲ್ ಟ್ರಸ್ಟ್ ಮತ್ತು 2010 ರಿಂದ ಭಾರತದಲ್ಲಿ ಸ್ಥಾಪಿಸಲಾದ ಪ್ರಮುಖ ಸ್ವತಂತ್ರ ವಾಸ್ತುಶಿಲ್ಪ ಶಾಲೆಗಳಲ್ಲಿ ಒಂದಾಗಿದೆ, ಇದನ್ನು ಸಿಒಎ ಅನುಮೋದಿಸಿದೆ ಮತ್ತು ವಿಟಿಯುಗೆ ಸಂಯೋಜಿತವಾಗಿದೆ, ವಾಸ್ತುಶಿಲ್ಪದ ಕೊಡುಗೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ಬಿ.ಆರ್ಚ್, ಎಂ.ಆರ್ಚ್ & ಪಿಎಚ್ಡಿ. ಕಾರ್ಯಕ್ರಮಗಳು.

ಸಿಜಿಬಿಎಂಟಿಯ 15 ನೇ ವರ್ಷದ ಸಸ್ಟೈನಬಲ್ ಲಿವಿಂಗ್ 02 ಸಂಭ್ರಮಾಚರಣೆಯನ್ನು ಬಿಎಂಎಸ್ಎಸ್ಎ ಸಹ-ಹೋಸ್ಟಿಂಗ್ ಮಾಡುತ್ತಿದೆ ಮತ್ತು ಸಿಜಿಬಿಎಂಟಿಯೊಂದಿಗೆ ಸಹಕರಿಸುವ ಮೂಲಕ ಸಂಶೋಧನೆಯ ಪ್ರಚೋದನೆಯನ್ನು ಹೆಚ್ಚಿಸಲು ಶಾಲೆಯ ಧ್ಯೇಯವನ್ನು ಉತ್ತೇಜಿಸುತ್ತಿದೆ, ಇದು ದೀರ್ಘಕಾಲದ ತಿಳುವಳಿಕೆಯ ಜ್ಞಾಪಕ ಪತ್ರಕ್ಕೆ (ಎಂಒಯು) ಸಹಿ ಹಾಕುವ ಮೂಲಕ ಪ್ರಯೋಜನಕಾರಿಯಾಗಿದೆ.

ಪಠ್ಯಕ್ರಮದ ಅಧ್ಯಯನದ ಭಾಗವಾಗಿ ಸುಸ್ಥಿರ, ಹಸಿರು ಕಟ್ಟಡ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ವಸ್ತುಗಳ ಜ್ಞಾನವನ್ನು ಪರಿಚಯಿಸುವ ಮೂಲಕ ಭವಿಷ್ಯದ ಪೀಳಿಗೆಯ ವಾಸ್ತುಶಿಲ್ಪಿಗಳು.
ಬಿಎಂಎಸ್ಎಸ್ಎ ಆರು ದಿನಗಳ (5 ರಿಂದ 10 ನವೆಂಬರ್ 2019) ಸಸ್ಟೈನಬಲ್ ಲಿವಿಂಗ್ ’02 ಫೆಸ್ಟ್ ನ ಚಟುವಟಿಕೆಯ ಭಾಗವಾಗಿದೆ, ಉದಾಹರಣೆಗೆ ಬಿದಿರಿನ ಕಾರ್ಯಾಗಾರ, ಬಿಎಂಎಸ್ಎಸ್ಎ ಮತ್ತು ಎಲ್ಲಾ ಶಾಲೆಗಳಿಗೆ ಬೋಧಕವರ್ಗ ಮತ್ತು ಎಲ್ಲಾ ಶಾಲೆಗಳಿಗೆ ಸ್ಪರ್ಧೆಗಳು ಮತ್ತು ಮಾತುಕತೆ ಯಲಹಂಕದ ಬಿಎಂಎಸ್ಎಸ್ಎ ಕ್ಯಾಂಪಸ್ನಲ್ಲಿ ಭಾರತ ಆಚರಿಸಲು ಒಗ್ಗೂಡುತ್ತಿದೆ.

City Today News

(citytoday.media)

9341997936

ಅಖಿಲ ಭಾರತ ಯಾದವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತಿನ ಸಭೆ ಹಾಗು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಸಂಘಗಳ ಪದಾಧಿಕಾರಿಗಳ ಸಮಾವೇಶ

ದಿನಾಂಕ 10 – 11 – 2019ರಂದು ( ಭಾನುವಾರ ) ಬೆಂಗಳೂರು ನಗರ ಕೃಷ್ಣರಾಜಪುರದಲ್ಲಿರುವ ಸೌತ್ ಈಸ್ಟ್ ಏಶಿಯಾ ಕಾಲೇಜಿನಲ್ಲಿ ಅಖಿಲ ಭಾರತ ಯಾದವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತಿನ ಸಭೆ ಹಾಗು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಸಂಘಗಳ ಪದಾಧಿಕಾರಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದು ಸದರಿ ಸಮಾವೇಶವನ್ನು ಶ್ರೀ ಶ್ರೀ ಶ್ರೀ ಯಾದವಾನಂದ ಸ್ವಾಮೀಜಿಯವರ ಸಮಕ್ಷಮದಲ್ಲಿ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ . ಬಿ . ಎಸ್ . ಯಡ್ಯೂರಪ್ಪನವರು ಉದ್ಘಾಟಿಸಲಿದ್ದಾರೆ .

ಸದರಿ ಸಮಾರಂಭದಲ್ಲಿ ಕೇಂದ್ರದ ಸಚಿವರುಗಳಾದ ಶ್ರೀ . ಡಿ . ವಿ . ಸದಾನಂದಗೌಡರು ಮಾನ್ಯ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು , ಶ್ರೀ ನಿತ್ಯಾನಂದ್ ರೈ ಯಾದವ್ , ಮಾನ್ಯ ಗೃಹ ರಾಜ್ಯ ಸಚಿವರು ಹಾಗು ನಮ್ಮ ರಾಜ್ಯದ ಸಚಿವರುಗಳಾದ ಡಾ . ಸಿ . ಎನ್ ಅಶ್ವಥ್‌ನಾರಾಯಣ್ , ಮಾನ್ಯ ಉಪಮುಖ್ಯಮಂತ್ರಿಗಳು , ಶ್ರೀ . ಕೆ . ಎಸ್ . ಈಶ್ವರಪ್ಪ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು , ಶ್ರೀ . ಕೆ . ಆರ್ . ಅಶೋಕ್ ಮಾನ್ಯ ಕಂದಾಯ ಸಚಿವರು , ಶ್ರೀ . ಸುರೇಶ್ ಕುಮಾರ ಮಾನ್ಯ ಶಿಕ್ಷಣ ಸಚಿವರು , ಡಾ . ಉದಯ್ ಪ್ರತಾಪ್‌ ಸಿಂಗ್‌ಜಿ , ಅಧ್ಯಕ್ಷರು ಅಖಿಲ ಭಾರತ ಯಾದವ ಮಹಾಸಭಾ ಹಾಗು ಯಾದವ ಜನಾಂಗದ ಇತರೆ ರಾಜ್ಯಗಳ ಸಚಿವರಾದ ಶ್ರೀ ಅನಿಲ್ ಕುಮಾರ್ ಮಾನ್ಯ ನೀರಾವರಿ ಸಚಿವರು , ಆಂಧ್ರ ಪ್ರದೇಶ , ಶ್ರೀ ಸಚಿನ್ ಯಾದವ್ ಮಾನ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರು ಮಧ್ಯ ಪ್ರದೇಶ , ಶ್ರೀ ವಾಸನ್ ಬಾಯ್ ಅಹೀರ್ ಮಾನ್ಯ ಮಹಿಳಾ ಮತ್ತು ಕಲ್ಯಾಣ ಸಚಿವರು ಗುಜರಾತ್ , ಶ್ರೀ ಹರೀಶ ಯಾದವ್ ಗ್ರಾಮ ಕೈಗಾರಿಕೆಗಳು ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಮಧ್ಯಪ್ರದೇಶ , ಶ್ರೀ ಅಶೋಕ್ ಸಿಂಗ್ ಯಾದವ್ ಅಧ್ಯಕ್ಷರು , ಅಪೆಕ್ಸ್ ಬ್ಯಾಂಕ್ ಮಧ್ಯಪ್ರದೇಶ , ಶ್ರೀ ಅರುಣ್ ಯಾದವ್ , ಮಾಜಿ ಸಚಿವರು ಭಾರತ ಸರ್ಕಾರ . ಶ್ರೀ ಕೆ . ಪಿ . ಯಾದವ್ , ಮಾನ್ಯ ಲೋಕಸಭಾ ಸದಸ್ಯರು ಗುಣಶಿವಪುರಿ , ಶ್ರೀ ಶ್ಯಾಮ್ ಸಿಂಗ್ ಯಾದವ , ಮಾನ್ಯ ಲೋಕಸಭಾಸದಸ್ಯರು ಉತ್ತರಪ್ರದೇಶ , ಶ್ರೀಮತಿ ಕೆ . ಪೂರ್ಣಿಮಾ ಶ್ರೀನಿವಾಸ್ ಮಾನ್ಯ ಶಾಸಕರು ಹಿರಿಯೂರು ಕ್ಷೇತ್ರ , ಶ್ರೀಮತಿ ಜಯಮ್ಮ ಬಾಲರಾಜ್ ಮಾನ್ಯವಿಧಾನಪರಿಷತ್ ಸದಸ್ಯರು , ಡಾ . ಸೋಪನ್ ಕುಮಾರ ಗೋಶ್‌ಜೀ ಕಾರ್ಯಾಧ್ಯಕ್ಷರು , ಅಖಿಲ ಭಾರತ ಯಾದವ ಮಹಾಸಭಾ , ಶ್ರೀ ಸತ್ಯಪ್ರಕಾಶ್ ಸಿಂಗ್ ಯಾದವ್ * ನಿಧಿ ‘ ಶ್ರೀ ಸತ್ಯಪ್ರಕಾಶ್ ಸಿಂಗ್ ಯಾದವ್‌ಜೀ ಪ್ರಧಾನ ಕಾರ್ಯದರ್ಶಿಗಳು , ಅಖಿಲ ಯಾದವ ಮಹಾಸಭಾ , ಶ್ರೀ ಡಿ . ಎ . ನರಸಿಂಹೇಗೌಡ ಅಧ್ಯಕ್ಷರು , ಕರ್ನಾಟಕ ರಾಜ್ಯ ಗೋಲ್ಲ ( ಯಾದವ ) ನೌಕರರ ಕ್ಷೇಮಾಭಿವದಿ ಸಂಘ , ಬೆಂಗಳೂರು , ಶ್ರೀ . ಎನ್ ತ್ಯಾಗರಾಜ್ , ಅಧ್ಯಕ್ಷರು , ಕರ್ನಾಟಕ ಯಾದವ ಶಿಕ್ಷಣ ಸೊಸೈಟಿ ಇವರುಗಳು ಭಾಗವಹಿಸುತ್ತಿದ್ದಾರೆ .

ಸದರಿ ಸಮಾರಂಭ ಅಧ್ಯಕ್ಷತೆಯನ್ನ ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷರಾದ ಶ್ರೀ . ಡಿ . ಟಿ . ಶ್ರೀನಿವಾಸ್‌ರವರು ವಹಿಸಲಿದ್ದು ಸದರಿ ಸಮಾರಂಭದಲ್ಲಿ ಜನಾಂಗದ ಅಭಿವೃದ್ದಿಗೆ ಬೇಡಿಕೆಗಳನ್ನ ಸಲ್ಲಿಸಲಾಗಿದ್ದು ಅವು ಈ ಕೆಳಕಂಡಂತಿದೆ .

1 . ಭಾರತೀಯ ಜನತಾ ಪಕ್ಷದ ತಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಗೊಲ್ಲ ಜನಾಂಗದ ಏಕಮೇವ – ಶಾಸಕಿಯಾದ ಶ್ರೀಮತಿ ಕೆ . ಪೂರ್ಣಿಮಾ ಶ್ರೀನಿವಾಸ್‌ರವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ .

2 . ಗೊಲ್ಲ ಸಮಾಜದ ಆರ್ಥಿಕ ಹಾಗು ಶೈಕ್ಷಣಿಕ ಅಭಿವೃದ್ದಿಗೆ ಪ್ರತ್ಯೇಕವಾದ ಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಬಗ್ಗೆ

3 , ಗೊಲ್ಲ ( ಯಾದವ ) ಜನಾಂಗ ಹಾಗು ಅದರಡಿಯಲ್ಲಿ ಬರುವ ಉಪಜಾತಿಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ವಹಿಸುವ ಬಗ್ಗೆ .

4 . ಕರ್ನಾಟಕ ರಾಜ್ಯ ಗೊಲ್ಲ / ಯಾದವ ಜನಾಂಗದ ವಿದ್ಯಾರ್ಥಿಗಳಿಗೆ ವಿಧಿಸಿರುವ ಆದಾಯ ಮಿತಿಯನ್ನ ತೆರವುಗೊಳಿಸುವ ಬಗ್ಗೆ ,

5 . ಬೆಂಗಳೂರು ಕರ್ನಾಟಕ ರಾಜ್ಯ ಯಾದವ ಸಂಘದ ಸಮುದಾಯಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ . 3 . 00 ಕೋಟಿ ಅನುದಾನವನ್ನ ಒದಗಿಸುವ ಬಗ್ಗೆ ಹಾಗು ರಾಜ್ಯದ ಇತರೇ ಜಿಲ್ಲೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸೂಕ್ತ ಅನುಧಾನ ಒದಗಿಸುವ ಬಗ್ಗೆ ಮತ್ತು ಈಗಾಗಲೇ ದೊಡ್ಡಬಳ್ಳಾಪುರದ ಘಾಟಿ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ಅನುದಾಣ ಒದಗಿಸುವ ಬಗ್ಗೆ .

6 . ಗೊಲ್ಲರ ಹಟ್ಟಿಗಳ ಅಭಿವೃದ್ಧಿಗೆ ವಿಶೇಷ ಅನುಧಾನವನ್ನ ಬಿಡುಗಡೆ ಮಾಡುವ ಬಗ್ಗೆ .

7 . ರಾಜ್ಯದ ನಿಗಮ ಮಂಡಳಿಗಳಲ್ಲಿ ಗೊಲ್ಲ / ಯಾದವ ಜನಾಂಗದವರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವ

8 , ಆಗ್ನೆಯ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಗೊಲ್ಲ ( ಯಾದವ ) ಜನಾಂಗದ ಪದವೀದರರು ಅತಿ ಹೆಚ್ಚಾಗಿರುವುದರಿಂದ ( ಕೋಲಾರ , ಚಿಕ್ಕಬಳ್ಳಾಪುರ , ತುಮಕೂರು , ಚಿತ್ರದುರ್ಗ , ಧಾವಣಗೆರೆ ) ನಮ್ಮ ಜನಾಂಗದ ರಾಜ್ಯಾಧ್ಯಕ್ಷರಾದ ಶ್ರೀ . ಡಿ . ಟಿ . ಶ್ರೀನಿವಾಸ್‌ರವರಿಗೆ ಪದವೀಧರರ ಕ್ಷೇತ್ರದಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಾರ್ಟಿ ವತಿಯಿಂದ ಟಿಕೆಟ್ ನೀಡುವ ಬಗ್ಗೆ .

ಶ್ರೀ . ಡಿ . ಟಿ . ಶ್ರೀನಿವಾಸ್ ಯಾದವ್

ಅಧ್ಯಕ್ಷರು

City Today News

(citytoday.media)

9341997936