“ಲಕ್ಷ -ದೀಪೋತ್ಸವ ಭಕ್ತರಿಂದ “ಗುರುಬಲ” ಪ್ರಾಪ್ತಿಗಾಗಿ”ಮಠದಲ್ಲಿ ವಿಶೇಷ “ಕಾರ್ತೀಕ- ದೀಪೋತ್ಸವ”



ಬೆಂಗಳೂರು : ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ  ಶ್ರೀ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶ ಅನುಗ್ರಹ ದೊಂದಿಗೆ ಶ್ರೀ ಮಠದ ವ್ಯವಸ್ಥಾಪಕರಾದ  ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ  ಮಾರ್ಗದರ್ಶನದಲ್ಲಿ”ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪಡೆದುಕೊಳ್ಳಲು ಗುರು ಪ್ರಾಪ್ತಿಗಾಗಿ ವಿಶೇಷ  ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿ  ಭಕ್ತರಿಗಾಗಿ ದೀಪಗಳನ್ನು ಪ್ರಜ್ವಲಿಸಲು ಸಿಬ್ಬಂದಿಗಳ ಭಕ್ತರ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆ  ಮಾಡಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು , ಈ ವಿಶೇಷವಾದ ದೀಪೋತ್ಸವದ ಕಾರ್ಯಕ್ರಮದಲ್ಲಿ.   ಶ್ರೀಯುತ ಶ್ರೀಪಾದ ಪಾಟೀಲ ವಾರ್ತಾ ವಿಭಾಗ, ರಿಪಬ್ಲಿಕ್ ಕನ್ನಡ, ರಿಪಬ್ಲಿಕ್ ನ್ಯಾಶನಲ್ ನೆಟ್ವರ್ಕ್ ವಾರ್ತಾ ನಿರೂಪಕರು ಅದ ಶ್ರೀಪಾದ್ ಪಾಟೀಲ್ ಕುಟುಂಬ ಸಮೇತ ಸನ್ನಿಧಿಗೆ ಆಗಮಿಸಿ ದೀಪಗಳನ್ನು ಬೆಳಗಿಸಿ ಗುರುಗಳ ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ಗುರು ರಾಯರ  ಅನುಗ್ರಹಕ್ಕೆ ಪಾತ್ರರಾದರು ಹಾಗೂ  ಭಕ್ತರು ಸಹ  ಲೋಕ ಕಲ್ಯಾಣಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿ ದೀಪಗಳನ್ನು ಪ್ರಜ್ವಲಿಸಿ ಫಲ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು  ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು

City Today News 9341997936

ನಾಳೆ ಭಾನುವಾರ ಅಮಾವಾಸ್ಯೆ “ಗುರುಬಲ” ಪ್ರಾಪ್ತಿಗಾಗಿ ಜಯನಗರದ ರಾಯರ ಮಠದಲ್ಲಿ ವಿಶೇಷ “ಕಾರ್ತೀಕ-ದೀಪೋತ್ಸವ” ಸಂಜೆ 6:30ಕ್ಕೆ



ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ  ನೇತೃತ್ವದಲ್ಲಿ ದಿನಾಂಕ  1-12-2024 ರಂದು ವಿಶೇಷ  ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ “ಲೋಕ-ಕಲ್ಯಾಣ”ಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಸಾಮೂಹಿಕ “ಲಕ್ಷ  ದೀಪೋತ್ಸವ” ದ ಕಾರ್ಯಕ್ರಮವನ್ನು  ಮಠದಲ್ಲಿ ಹಮ್ಮಿಕೊಂಡಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ. ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಾನುವಾರ ಸಂಜೆ 6-30ಕ್ಕೆ ದೀಪಗಳನ್ನು ಪ್ರಜ್ವಲಿಸುವ ಮೂಲಕ  ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ  ಶ್ರೀ ಹರಿ- ವಾಯು-ಗುರುಗಳ ಅನುಗ್ರಹಕ್ಕೆ  ಪಾತ್ರಾಗಬಹುದು.

ಈ ಸೇವೆಯಲ್ಲಿ  ಭಾಗವಹಿಸುವ ಭಕ್ತರು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 – ಆನ್ಲೈನ್ ಮುಖಾಂತರ ಸೇವೆಸಲ್ಲಿಸಬಹುದು  ಹೆಚ್ಚಿನ ಮಾಹಿತಿಗಾಗಿ- ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು  ಸಂಪರ್ಕಿಸಬಹುದಾಗಿದೆ.

City Today News 9341997936

ಶ್ರೀ ಗುರುರಾಯರ ಸನ್ನಿಧಿಯಲ್ಲಿ ಗುರುವಾರ ಪ್ರಯುಕ್ತ ವಿಶೇಷ “ವೀಣಾವಾದನ”

ಪರಮಪೂಜ್ಯ ಶ್ರೀ1008  ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ  ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ  ನವೆಂಬರ್ 28, ಗುರುವಾರ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, ರಾಯರ ಬೃಂದಾವನಕ್ಕೆ  ವಿಶೇಷ ಅಲಂಕಾರ ಸಹಸ್ರಾರು  ಭಕ್ತರಿಗೆ ಅನ್ನದಾನ ಸೇವೆ ಜರುಗಿದವು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು. ನಂತರ ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ ಪಲ್ಲಕ್ಕಿ ಉತ್ಸವ, ನರ್ತನ ಸೇವೆ, ಗಜವಾಹನೋತ್ಸವ ತೊಟ್ಟಿಲು ಸೇವೆ ಕಾರ್ತೀಕ ದೀಪೋತ್ಸವಗಳ ಸೇವೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಮಾಲಾ ವೆಂಕಟೇಶ್ ಮತ್ತು ಅವರ ಶಿಷ್ಯೆ ಕು|| ಸ್ಫೂರ್ತಿ ಗುರುಪ್ರಸಾದ್ ಅವರಿಂದ ವೀಣಾ ವಾದನ ಕಾರ್ಯಕ್ರಮವು ಜರುಗಿತು. ಇವರ ವೀಣಾ ವಾದನಕ್ಕೆ ಸಹವಾದ್ಯದಲ್ಲಿ ವಿದ್ವಾನ್ ಮುರಳಿ ನಾರಾಯಣರಾವ್ ಮೃದಂಗದಲ್ಲಿ ಹಾಗೂ ವಿದ್ವಾನ್ ಬಾಲಸುಬ್ರಹ್ಮಣ್ಯಂ ಘಟದಲ್ಲಿ ಸಾಥ್ ನೀಡಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿ ವಾಯು  ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಮಂತ್ರಾಲಯದ ಶ್ರೀ1008 ಸುಬುಧೇಂದ್ರತೀರ್ಥ ಶ್ರೀಗಳಿಂದ 24 ಅಡಿ ಎತ್ತರದ “ಕಾಮಧೇನು ಕಲ್ಪವೃಕ್ಷ” ಶ್ರೀ ಗುರು ರಾಯರ ಪ್ರತೀಕ “ಉದ್ಘಾಟನೆ” ಜಯನಗರ ರಾಯರ ಮಠದ ಆವರಣದಲ್ಲಿ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಶ್ರೀ  ಸುಬುಧೇಂದ್ರತೀರ್ಥ  ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ತದ ನಂತರ ರಾಯರ  24ಅಡಿ ಎತ್ತರದ ರಾಯರ ಪ್ರತೀಕವನ್ನು  ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ  ಶ್ರೀಪಾದರು ಉದ್ಘಾಟಿಸಿದರು ರಾಯರ ಅಂತರಂಗ ಭಕ್ತರಾದ,ಪ್ರತೀಕದ ಸಂಪೂರ್ಣ ವೆಚ್ಚವನ್ನು ಭರಿಸಿದ ಮುಕುಂದ ಕೃಷ್ಣ ಅವರಿಗೂ ಮತ್ತು ಈ ಚಿತ್ರಕಲೆ ನಿರ್ಮಾಣ ಮಾಡಿದ ಶಿವದತ್ತರಿಗೂ ರಾಯರ ಶೇಷ ವಸ್ತ್ರ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು ವಿಶೇಷವಾಗಿ ಈ ರಾಯರ ಪ್ರತೀಕವೂ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ  ಭಕ್ತರ ಸಹಕಾರದೊಂದಿಗೆ ಭಕ್ತರಿಂದ,ಭಕ್ತರಿಗಾಗಿ ,ಭಕ್ತರ ಅನುಗ್ರಕ್ಕಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ  ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ “ಲೋಕಾರ್ಪಣೆ”ಗೊಂಡಿತು.ಬಹಳ ಸುಂದರ ಅಪರೂಪವಾದ ಕಾಮಧೇನು- ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತೀಕದ ಸಂಪೂರ್ಣ ಜವಾಬ್ದಾರಿಯ ನಿರ್ವಹಣೆಯನ್ನು ಮಾಡಿದ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರಿಗೆ ಶ್ರೀ ಗುರುರಾಯರ ಅನುಗ್ರಹ ಸದಾ ಕಾಲ ಇರಲಿ ಎಂದು ಅನುಗ್ರಹಿಸಿದರು
ಪೂರ್ಣಪ್ರಜ್ಞ   ವಿದ್ಯಾ ಪೀಠದ ಹತ್ತಿರ ಇರುವ ಸ್ಥಪತಿ ಕ್ರಿಯೇಶನ್ಸ್ ನ ಮುಖ್ಯಸ್ಥರಾದ ಎನ್ ಶಿವದತ್ತ ರವರ ನಿರ್ದೇಶನದಲ್ಲಿ ಸುಮಾರು ಎರಡೂವರೆ ತಿಂಗಳಿನ ಗಡುವಿನಲ್ಲಿ 24 ಅಡಿ ಎತ್ತರದ 12 ಅಡಿ ಅಗಲ 3 ಅಡಿ ದಪ್ಪ ಉಳ್ಳ ಎಫ್ ಆರ್ ಪಿ ಮೌಲ್ಡ್  ಇಂದ “ಕಾಮಧೇನು ಕಲ್ಪವೃಕ್ಷ “ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ರಾಮ ಕೃಷ್ಣರ” ಭಾವಚಿತ್ರದ  ನಿರ್ಮಾಣದ ಜವಾಬ್ದಾರಿಯನ್ನು ಶ್ರೀಯುತ ಶಿವದತ್ತರವರ ತಂಡವರಾದ  ರವಿಕುಮಾರ್, ಪ್ರವೀಣ್ ಕುಮಾರ್, ಶ್ರೀ ರಾಮ್, ನಾಗರಾಜ್, ಪ್ರದೀಪ್, ಶರತ್ ಚಂದ್ರ, ಮತ್ತು ಚಾಂದ್ ಇವರುಗಳ ಸಹಕಾರದಿಂದ ಒಟ್ಟುಗೂಡಿ ಸುಂದರವಾದ ಈ ಪ್ರತೀಕವನ್ನು ಶ್ರದ್ಧೆ ಮತ್ತು ಭಕ್ತಿ ತನು ಮನದಿಂದ ನಿರ್ಮಾಣ ಮಾಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತರಾಗಿದ್ದಾರೆ ಎಂದು ಶ್ರೀ ಮಠದ ಪುರೋಹಿತರಾದ ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು.

City Today News 9341997936

ಉದ್ಭವ ಕಲಾವಿದರು ಆಯೋಜಿಸಿದ್ದ  ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ 69ನೇ ಕನ್ನಡ ರಾಜ್ಯೋತ್ಸವ

ಉದ್ಭವ ಕಲಾವಿದರು ಆಯೋಜಿಸಿದ್ದ  ಐದನೇ ವರ್ಷದ ವಾರ್ಷಿಕೋತ್ಸವ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾಗ್ರಾಮದ ಸಮುಚ್ಚಾಯ ಭವನದಲ್ಲಿ ಎರಡು ದಿನಗಳ ನಾಟಕೋತ್ಸವದ ಪ್ರಯುಕ್ತ ಉದ್ಘಾಟನಾ ಸಮಾರಂಭವನ್ನು ಚಲನಚಿತ್ರ ದೂರದರ್ಶನ ರಂಗ ಭೂಮಿ ನಟಿ ಶ್ರೀಮತಿ ಲಕ್ಷ್ಮಿ ಭಟ್, ಡಾಕ್ಟರ್ ಪಾರ್ಶ್ವನಾಥ್,

ಪ್ರೆಸ್ ಕ್ಲಬ್ ನ ನಿವೃತ್ತ ಉದ್ಯೋಗಿ ಶ್ರೀ ಶಿವರುದ್ರಪ್ಪನವರು, ಕರಾಟೆ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಂದ್ರ ಪ್ರಸಾದ್, ಖಜಾಂಚಿ ಶಾಂತ ಇನ್ನಿತರ ಹೆಸರಾಂತ ನಟ ನಟಿಯರು ಉದ್ಘಾಟಿಸಿದರು.

City Today News 9341997936