ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆರಾಧನೆಗೆ ವಿಶೇಷ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ಮಂತ್ರಾಲಯ ಕ್ಷೇತ್ರ ರಾಯರ ಸನ್ನಿಧಿಗೆ ಪ್ರಯಾಣವನ್ನು ಬೆಳೆಸಿ ದೇವಿ ಮಂಚಾಲಮ್ಮನ ದರ್ಶನ, ಶ್ರೀ ಗುರುರಾಯರ ದರ್ಶನ, ಶ್ರೀ ಮೂಲ ರಾಮದೇವರ ಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ನಂತರ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶದೊಂದಿಗೆ ಭಕ್ತರು ಫಲ ಮಂತ್ರಾಕ್ಷತೆ ಸ್ವೀಕರಿಸಿ ಸಂಜೆ ಮಹಾ ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು. ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರ, ಶ್ರೀ ನಂದಕಿಶೋರಾಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ನೆರವೇರಿತು.
ಸಿರಿವರ ಕಲ್ಚರಲ್ ಅಕಾಡೆಮಿ ಹಾಗೂ ಅನನ್ಯ ಕ್ರಿಯೇಷನ್ ಸಹಯೋಗದಲ್ಲಿ ದಿನಾಂಕ 02/09/2024 ರ ಸಂಜೆ 6 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಸಾಹಿತಿಗಳಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಅಂದು ನಮ್ಮೊಂದಿಗೆ ಹಿರಿಯ ಸಾಹಿತಿಗಳು , ಕನ್ನಡ ಅಭಿವೃಧ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷರು ಪ್ರೊ. ಎಸ್.ಜಿ.ಸಿದ್ದರಾಮಯ್ಯ , ಹಿರಿಯ ಸಂಗೀತ ನಿರ್ದೇಶಕರಾದ ಡಾ.ಹಂಸಲೇಖ ಅವರು, ಹಾಗೂ ನಾಟಕ ಅಕಾಡೆಮಿ ಸದಸ್ಯರಾದ ಶ್ರೀ ರವೀಂದ್ರನಾಥ ಸಿರಿವರ ಅವರು ಉಪಸ್ಥಿತಿ ಇರುವರು. ಕಾರ್ಯಕ್ರಮದ ನಂತರ ಮೈಸೂರಿನ GPIER ಕಲಾ ತಂಡದಿಂದ ಡಾ.ಹೆಚ್.ಎಸ್.ಶಿವಪ್ರಕಾಶ್ ವಿರಚಿತ “ಮಂಟೇಸ್ವಾಮಿ ಕಥಾ ಪ್ರಸಂಗ ” ನಾಟಕ ಪ್ರದರ್ಶನ.
ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ಶ್ರೀ “ಕೃಷ್ಣಾರ್ಘ್ಯ” ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಸುವರ್ಣದ ತೊಟ್ಟಿಲನಲ್ಲಿ ನಂದಗೋಕುಲವನ್ನು ನಿರ್ಮಾಣ ಮಾಡಿ ರಾತ್ರಿ 11:58 ಕ್ಕೆ ಜನಿಸಿದ ಶ್ರೀ ಕೃಷ್ಣನಿಗಾಗಿ ಉಪವಾಸದಿಂದ ಇದ್ದುಕೊಂಡು ಲೋಕಕಲ್ಯಾಣಕ್ಕಾಗಿ ಭಕ್ತರಿಂದ ಶ್ರೀ ಮಠದ ಸಿಬ್ಬಂದಿಗಳಿಂದ ರಾತ್ರಿ 11-58 ನಿಮಿಷಕ್ಕೆ ಕೃಷ್ಣಾರ್ಘ್ಯ ಪ್ರಧಾನ ಮಾಡಲಾಯಿತು ಕೃಷ್ಣಾರ್ಘ್ಯದ ಪ್ರಯುಕ್ತ ದೇವರಿಗೆ ಚಕ್ಕುಲಿ ಹುಂಡಿ ಇತ್ಯಾದಿ ತಿನಿಸುಗಳನ್ನು ತಯಾರಿಸಿ ದೇವರ ನೈವೇದ್ಯಕ್ಕೆ ಇರಿಸಲಾಗಿ ನಂತರ ಚಾಮರಸೇವೆ,ಜೋಗುಳದ ಲಾಲಿ ಹಾಡನ್ನು ಹಾಡುತ್ತಾ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು, ಈ ಸಂದರ್ಭದಲ್ಲಿ ಆರ್, ಕೆ ವಾದಿಂದ್ರ ಆಚಾರ್ಯ ಮತ್ತು ಶ್ರೀ ನಂದಕಿಶೋರ್ ಆಚಾರ್ಯ, ಅರ್ಚಕ ವೃಂದದವರು ಭಕ್ತರು ಸಿಬ್ಬಂದಿಗಳು ಭಾಗವಹಿಸಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 26 ಆಗಸ್ಟ್ 2024 ರಂದು ಆರ್ಟ್ ಕಲ್ಚರ್ ಎಜುಕೇಶನಲ್ ಎನ್‌ಲೈಟ್ ಫೌಂಡೇಶನ್ (ರಿ) ಡಾ ಅಂಬಿಕಾ ಸಿ ಅವರ ಸಹಯೋಗದೊಂದಿಗೆ ನ್ಯೂ ಪ್ರಥಮ್ ಪಬ್ಲಿಕ್ ಶಾಲೆ ಪೈ ಲೇಔಟ್, ಟೀನ್ ಫ್ಯಾಕ್ಟರಿ ಬೆಂಗಳೂರಿನ ಶಾಲಾ ಮಕ್ಕಳು ಮತ್ತು ಶಿಕ್ಷಕಿಯರು ಶ್ರೀ ಕೃಷ್ಣ ನೃತ್ಯ ರಾಸಲೀಲೆ , ಶ್ರೀ ಕೃಷ್ಣ, ರಾಧೆ, ಯಶೋದೆ, ವೇಷ ಭೂಷಣಧಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷದಿಂದ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸಂಭ್ರಮಿಸಿದರು.
ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ಮತ್ತು ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ಕಾಣಿಯೂರು ಮಠಾಧೀಶರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವವು ಆರಂಭಗೊಂಡಿತು.ಈ ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಭಿಷೇಕ ದಿನಕ್ಕೊಂದು ಅಲಂಕಾರ ವಿಶೇಷ ಪೂಜಾ ಉತ್ಸವ,ರಾಯರ ಪಾದಪೂಜಾ, ಪ್ರವಚನ ಕೈಂಕರ್ಯಗಳು, ಮತ್ತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೆ ಅನ್ನದಾನಸೇವೆ, ಸಂಜೆಯ ಪೂಜಾ ಕಾರ್ಯಕ್ರಮಗಳು, ದಾಸವಾಣಿ, ಸ್ಯಾಕ್ಸೋಫೋನ್ ವಾದನ.ಆಗಸ್ಟ್ 24 ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನೃತ್ಯ ದಿಶಾ ಟ್ರಸ್ಟ್ ನ ಸುಮಾರು 60ಮಕ್ಕಳವಿದ್ಯಾರ್ಥಿ ಗಳಿಂದ”ಭರತನಾಟ್ಯ”ಪ್ರದರ್ಶನ ಜರುಗಿತು. ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಆರಾಧನೆಯ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ, ಸ್ವಯಂ ಸೇವಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಮಂತ್ರಾಲಯ ಶ್ರೀಪಾದರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರ ಆಚಾರ್ಯರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಪ್ತ ರಾತ್ರೋತ್ಸವದ ಸಂದರ್ಭದಲ್ಲಿ 62,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನಸಂಪರ್ಪಣೆಯೂ ಬೆಳಗ್ಗೆ 11-30 ರಿಂದ ರಾತ್ರಿ 10-30 ವರೆಗೂ ನಿರಂತರವಾಗಿ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.
You must be logged in to post a comment.