“www.ksoumysuru.ac.in” 3 KSOU Admission Portal ಅಧಿಕೃತ ವೆಬ್‌ ಸೈಟ್ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್‌ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ದಪಾಠಗಳನ್ನು ಪಡೆಯಬಹುದು.



ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬ ಧೈಯ ವಾಕ್ಯದೊಂದಿಗೆ 1996ರಲ್ಲಿ ಕರ್ನಾಟಕ ಸರ್ಕಾರದಿಂದ ಶಾಸನಬದ್ಧವಾಗಿ ಸ್ಥಾಪಿತವಾಗಿ ಕರ್ನಾಟಕದ ಸಾಂಸ್ಕೃತಿಕ ಅರಮನೆ ನಗರ ಮೈಸೂರಿನ ಕೇಂದ್ರ ಭಾಗದಲ್ಲಿ ಅತ್ಯಂತ ಸುಂದರವಾದ ಹಚ್ಚ ಹಸಿರಿನ ಪರಿಸರದಲ್ಲಿ ಸುಸಜ್ಜಿತವಾದ ಆಡಳಿತ ಭವನ, ಪರೀಕ್ಷಾ ಭವನ, ವಿಜ್ಞಾನ ಭವನ, ಗ್ರಂಥಾಲಯ, ವಿದ್ಯಾರ್ಥಿ ನಿಲಯಗಳನ್ನು ಒಳಗೊಂಡ “ಮುಕ್ತ ಗಂಗೋತ್ರಿ” ಎಂಬ ಹೆಸರಿನಲ್ಲಿ ವಿವಿಯು ನೆಲೆಗೊಂಡಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು “ಸ್ವಯಂ ಹಣಕಾಸು ವ್ಯವಸ್ಥೆಯನ್ನು” (Self Finance System) ಹೊಂದಿರುವ ಒಂದು ಸಂಸ್ಥೆಯಾಗಿದೆ. UGC ಇಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಅಥವಾ ಇನ್ನಾವುದೇ ಮೂಲದಿಂದ ಅನುದಾನವಿಲ್ಲದೆ, ಪ್ರವೇಶಾತಿ, ಪರೀಕ್ಷಾ ಶುಲ್ಕದ ರೂಪದಲ್ಲಿ ವಿದ್ಯಾರ್ಥಿಗಳಿಂದ ಪಡೆಯುವ ಹಣದಿಂದಲೇ ವಿಶ್ವವಿದ್ಯಾನಿಲಯದ ಸಿಬ್ಬಂದಿಗಳ ವೇತನ ಸೌಲಭ್ಯ, ವಿ.ವಿ.ಯ ಅಭಿವೃದ್ಧಿ ಕಾರ್ಯಗಳನ್ನು ತನ್ನ ಸ್ವಂತ ಸಂಪಾದನೆಯಲ್ಲಿಯೇ ನಿರ್ವಹಿಸಿಕೊಂಡು ಬರುತ್ತಿದ್ದು, ಇದಾಗ್ಯೂ ವಿ.ವಿ.ಯು ಸಮಾಜಕ್ಕೆ ತನ್ನ ಕೈಲಾದ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ಕೆಲವು ಅವಶ್ಯಕ ವರ್ಗಗಳಿಗೆ ಶುಲ್ಕ ಭಾಗಶಃ/ಸಂಪೂರ್ಣ ವಿನಾಯಿತಿ ನೀಡುವಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉನ್ನತ ಶಿಕ್ಷಣವನ್ನು ವ್ಯಾಪಕವಾಗಿ ವಿಸ್ತರಿಸುವ ದೃಷ್ಟಿಯಿಂದ ಬಹುಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 06 (ಬಾಪೂಜಿನಗರ, ಮಲ್ಲೇಶ್ವರಂ, ಯಲಹಂಕ, ಮಡಿವಾಳ, ಕೆ.ಆರ್.ಪುರಂ, ಸುಂಕದಕಟ್ಟೆ.) ಪ್ರಾದೇಶಿಕ ಕೇಂದ್ರಗಳು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಒಟ್ಟು 36 ಪ್ರಾದೇಶಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ, ಜೊತೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೇ ಪರೀಕ್ಷಾ ಕೇಂದ್ರಗಳು, ವಾರಾಂತ್ಯ ಸಂಪರ್ಕ ತರಗತಿಗಳು ಮತ್ತು ವಿಜ್ಞಾನ ವಿಷಯಗಳಿಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತವೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಾಂತ 150 ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿ ಸ್ನೇಹಿ ಉನ್ನತ ಶಿಕ್ಷಣವನ್ನು ದೂರ ಶಿಕ್ಷಣದಲ್ಲಿ ಒದಗಿಸುತ್ತಾ 25 ವರ್ಷಗಳ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿ ಮುನ್ನಡೆಯುತ್ತಿದೆ. 18 ವರ್ಷದಿಂದ 80 ವರ್ಷ ವಯೋಮಾನದವರೆಗಿನ ಲಕ್ಷಾಂತರ ಮಂದಿಗೆ ವಿದ್ಯೆ ನೀಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡುತ್ತಾ ಬರುತ್ತಿದೆ.

10+2/ಪದವಿ ಅನ್ನು ಮುಗಿಸಿ ನಂತರ ತಮ್ಮ ವೈಯಕ್ತಿಕ, ಕೌಟುಂಬಿಕ ಕಾರಣಗಳಿಂದಾಗಿ ತಮ್ಮ ಉನ್ನತ ವಿದ್ಯಾಭ್ಯಾಸದ ಕನಸನ್ನು ಅರ್ಧದಲ್ಲೇ ಮೊಟಕುಗೊಳಿಸಿ ಕೊಂಡಿರುವಂತಹ, ಹಾಗೇಯೇ ಗೃಹಿಣಿಯರು, ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ, ಪ್ಯಾಕ್ಟರಿಗಳಲ್ಲಿ ನೌಕರರಾಗಿ/ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು ಕರಾಮುವಿಯಲ್ಲಿ ತಮ್ಮ ಉನ್ನತ(ಸ್ನಾತಕ/ಸ್ನಾತಕೋತ್ತರ) ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

> ದೂರ ಶಿಕ್ಷಣ ನೀಡುವ ಕರ್ನಾಟಕ ರಾಜ್ಯದ ಏಕ ಮಾತ್ರ ವಿಶ್ವವಿದ್ಯಾನಿಲಯ:

ಕರ್ನಾಟಕ ರಾಜ್ಯದಲ್ಲಿ ಕ.ರಾ.ಮು.ವಿ. ಹೊರತುಪಡಿಸಿ ಬೇರಾವುದೇ ಸಾಂಪ್ರದಾಯಿಕ ವಿ.ವಿ.ಗಳು ದೂರ ಮತ್ತು ಮುಕ್ತ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲವೆಂದು ಕರ್ನಾಟಕ ಘನ ಸರ್ಕಾರವು ದಿನಾಂಕ: 30.12.2020ರ ಕರ್ನಾಟಕ ರಾಜ್ಯ ಪತ್ರದಲ್ಲಿನ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ43 ಶಾಸನದಲ್ಲಿ ಅಧಿಕೃತವಾಗಿ ಆದೇಶಿಸಿದ್ದು, ಈ ಆದೇಶದನ್ವಯ ಪ್ರಸ್ತುತ ರಾಜ್ಯದಲ್ಲಿ ಕರಾಮುವಿಯು ದೂರಶಿಕ್ಷಣ ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿರುತ್ತದೆ.

> ಕ.ರಾ.ಮು.ವಿ. ಶಿಕ್ಷಣಕ್ರಮಗಳಿಗೆ ಯು.ಜಿ.ಸಿ. ಮಾನ್ಯತೆ: ಕರಾಮುವಿಯು UGC-DEB ಪತ್ರ ಸಂಖ್ಯೆ 4-1/2023 (DEB- III) (ODL) 2:02.11.2023 & F No: 04-1/2023 (DEB-III), 20:04-12-2023, 5 & ಮಾನ್ಯತೆ ಹೊಂದಿದ ಶಿಕ್ಷಣ ಕಾರ್ಯಕ್ರಮಗಳಿಗೆ ಮಾತ್ರ ಪ್ರವೇಶಾತಿ ನೀಡುತ್ತಿದೆ.

> ಕರಾಮುವಿ ಶೈಕ್ಷಣಿಕ ಗುಣಮಟ್ಟಕ್ಕೆ ನ್ಯಾಕ್ ನಿಂದ A+ ಗ್ರೇಡ್ ದೊರೆತಿದೆ (3.35/5).

> ಸಾಂಪ್ರದಾಯಿಕ ವಿ.ವಿ.ಗಳು ನೀಡುವ ಪದವಿಗಳು ಮತ್ತು ಕರಾಮುವಿ ನೀಡುವ ಪದವಿಗಳು ಸಮಾನ ಅರ್ಹತೆ: .4.4. F. No.3-5/2022(DEB-III), 2:02.09.2022ថ ម ಮುಕ್ತ ವಿಶ್ವವಿದ್ಯಾನಿಲಯಗಳ ದೂರಶಿಕ್ಷಣದ ಪದವಿ ಸಾಂಪ್ರದಾಯಕ ವಿ.ವಿ.ಗಳು ನೀಡುವ ಶಿಕ್ಷಣ ಕ್ರಮಗಳಿಗೆ ಸಮಾನವಾಗಿರುತ್ತದೆ.

> ಏಕಕಾಲದಲ್ಲೇ ಎರಡು ಪದವಿ(ದ್ವಿ-ಪದವಿ). ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ (ಭೌತಿಕ ಶಿಕ್ಷಣ) (Regular) ಒಂದು ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ (Open University) ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲೇ ಮಾಡಲು ಅವಕಾಶವಿರುತ್ತದೆ. (UGC Secretary letter No: D.O.No. 1-6/2007 (CPP-II) (New) : 13.04.2022)

> ಸಮಾಜದ ಕೆಲವು ಗಣ್ಯವ್ಯಕ್ತಿಗಳು/ಉನ್ನತ ಅಧಿಕಾರಿಗಳು ಕರಾಮುವಿಯ ವಿದ್ಯಾರ್ಥಿಗಳಾಗಿರುತ್ತಾರೆ. ಕ.ರಾ.ಮು.ವಿ.ಯಲ್ಲಿ ಪದವಿ/ಸ್ನಾತಕೋತ್ತರ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು, ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಶ್ರೇಣಿಯ ಸರ್ಕಾರಿ ಹುದ್ದೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆ.ಎ.ಎಸ್., ಐ.ಎ.ಎಸ್., ಪೊಲೀಸ್ ಅಧಿಕಾರಿಗಳಾಗಿ, ಅಧ್ಯಾಪಕರಾಗಿ, ಶಿಕ್ಷಕರಾಗಿ ಕರಾಮುವಿಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್‌ರವರು, ಮಾನ್ಯ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್‌ರವರು, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್‌ರವರು, ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾರವರು, ಮಾಜಿ ಸಚಿವರಾದ ಶ್ರೀ ಸಿ.ಟಿ ರವಿರವರು ಮತ್ತು ಶ್ರೀಮತಿ ಉಮಾಶ್ರೀರವರು, ಮುಂತಾದವರು ಹಾಗೂ ಹಲವಾರು ಕೆ.ಎ.ಎಸ್., ಐ.ಎ.ಎಸ್., ಅಧಿಕಾರಿಗಳು, ನ್ಯಾಯಾಧೀಶರು ಕರಾಮುವಿಯ ವಿದ್ಯಾರ್ಥಿಗಳೆಂದು ಪರಿಚಯಿಸುವುದು ನಮಗೆ ಹೆಮ್ಮೆಯ ಸಂಗತಿಯಾಗಿರುತ್ತದೆ.

2024-25ರ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ 64+ODL ಕೋರ್ಸ್‌ಗಳ ಪ್ರವೇಶಾತಿ ಪ್ರಾರಂಭವಾಗಿದೆ:

ಪ್ರಸ್ತುತ 2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿಯು ದಿನಾಂಕ: 22.07.2024 ರಿಂದ ಪ್ರಾರಂಭವಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯು, ಬಿ.ಎಲ್.ಐ.ಎಸ್ಸಿ., ಬಿ.ಎಡ್.(ಸಿ.ಇ.ಟಿ. ಮುಖಾಂತರ) ಹಾಗೂ ಬಿ.ಎಸ್ಸಿ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಲ್.ಐ.ಎಸ್ಸಿ.,

ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ., ಎಂ.ಬಿ.ಎ., ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್., ಡಿಪ್ಲೋಮಾ ಪ್ರೋಗ್ರಾಮ್ಸ್..

ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿ ಪ್ರಕ್ರಿಯೆಗಳು ಪ್ರಾರಂಭಗೊಂಡಿರುತ್ತವೆ.

ಕರಾಮುವಿ ಬೆಂಗಳೂರಿನಲ್ಲಿ 06 ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸುವುದೇನೆಂದರೆ ಕರಾಮುವಿಯ “www.ksoumysuru.ac.in” 3 KSOU Admission Portal ಅಧಿಕೃತ ವೆಬ್‌ ಸೈಟ್ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್‌ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ದಪಾಠಗಳನ್ನು ಪಡೆಯಬಹುದು.

➤ M.B.A, M.C.A. & M.Sc Data Science / AICTE ជ ដា ដ໖ (F.No: South: West/2023-24/1-43337817229, Dated: 10.06.2023).

ಶಿಕ್ಷಣ ಕ್ರಮವು NCTE ০

ដ (F.No:SRC/NCTE/A0S00319/B.ED

ODL/KA/2023/143893, dated: 12.12.2023).

> ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ:

ಇತರೆ ಕಾಲೇಜಿನಲ್ಲಿ ಅಥವಾ Regular ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಾಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ Regular ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಆರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದು.

> 10 ಆನ್‌ಲೈನ್ ಕೋರ್ಸ್‌ಗಳು: ಬಿ.ಎ-ಸಾಮಾನ್ಯ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿ.ಕಾಂ., ಎಂ.ಎ.-ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂ.ಕಾಂ., ಎಂ.ಬಿ.ಎ., ಎಂ.ಎಸ್ಸಿ.-ಗಣಿತಶಾಸ್ತ್ರ., ಸಂಪೂರ್ಣ ಆನ್‌ಲೈನ್ ಕೋರ್ಸ್‌ಗಳು ಇರುತ್ತವೆ.

ಕ.ರಾ.ಮು.ವಿ.ಯು ಪ್ರವೇಶಾತಿಯಲ್ಲಿ ಒದಗಿಸಿರುವ ರಿಯಾಯಿತಿಗಳು

> ಬೋಧನಾ ಶುಲ್ಕದಲ್ಲಿ ಶೇ10 ರಷ್ಟುರಿಯಾಯಿತಿ:

• ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ.

• ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ.

• ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ.

• KSRTC/BMTC/NWKSRTC/KKRTC 0.

> ಪೂರ್ಣ ಶುಲ್ಕವಿನಾಯಿತಿ:

• ತೃತೀಯ ಲಿಂಗದ (Transgender) ವಿದ್ಯಾರ್ಥಿಗಳಿಗೆ.

ದೃಷ್ಟಿಹೀನ ವಿದ್ಯಾರ್ಥಿಗಳಿಗೆ (B.Ed/MBA ಹೊರತುಪಡಿಸಿ).

• ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಮೃತರಾದ ಆ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆವಿರುವ ಕೋರ್ಸಿಗೆ ಉಚಿತ ಪ್ರವೇಶಾತಿ ನೀಡಲಾಗುವುದು.

ವಿಶೇಷ ಸೂಚನೆ:

ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ SC/ST/OBC ವಿದ್ಯಾರ್ಥಿಗಳಿಗೂ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ SSP ಮುಖಾಂತರ ವಿದ್ಯಾರ್ಥಿ ವೇತನವಿರುತ್ತದೆ ಅಥವಾ ಪೂರ್ಣಶುಲ್ಕ ಮರುಭರಿಕೆಯಾಗುತ್ತದೆ.

ಕ.ರಾ.ಮು.ವಿ.ಯ ವೈಶಿಷ್ಟ್ಯತೆಗಳು/ಸೌಲಭ್ಯಗಳು

• ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ, ಪ್ರತಿ ತಾಲೂಕಿನಲ್ಲಿ ಅಧ್ಯಯನ ಕೇಂದ್ರಗಳ ಸ್ಥಾಪನೆ.

ಎಲ್ಲಾ ಶೈಕ್ಷಣಿಕ ಕ್ರಮಗಳ ಕಲಿಕಾ ಅಧ್ಯಯನ ಸಾಮಗ್ರಿ ಡಿಜಿಟಲೀಕರಣ, ಪ್ರತ್ಯೇಕ “KSOU ACADEMIC PLAT FORM App” ನ ಮುಖಾಂತರ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗೆ ಸಂಬಂಧ ಪಟ್ಟ LESSON SOFT COPY, ASSIGNMENT UPLOAD, LIVE CLASSES, VERTUAL CLASSES, OLD QUESTION PAPER, EXAMINATION FEE, ಹೀಗೆ ಎಲ್ಲಾ ಇನ್ನಿತರ ಮಾಹಿತಿಗಳನ್ನು ಒಂದೇ App ನಲ್ಲಿ ಒದಗಿಸಲಾಗಿದೆ.

• ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಅಭ್ಯಸಿಸಲು ಅನುಕೂಲವಾಗುವಂತೆ ಕರಾಮುವಿ ದೃಶ್ಯವಾಹಿನಿ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಕಾರ್ಯನಿರ್ವಹಿಸುತ್ತಿದೆ, ಇದರಲ್ಲಿ ಅಧ್ಯಾಪಕರ ಬೋಧನಾ ವಿಡಿಯೋಗಳು ವಿದ್ಯಾರ್ಥಿಗಳಿಗೆ ಲಭ್ಯವಿರುತ್ತವೆ.

• ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗ ರಚನೆ, ರಾಜ್ಯದ ಎಲ್ಲೆಡೆ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಗಳ ಆಯೋಜನೆ.

• ಕ.ರಾ.ಮು.ವಿ. ‘ಪ್ರಸಾರಾಂಗ, ರೇಡಿಯೋ ಸ್ಥಾಪನೆ.

• ಕ.ರಾ.ಮು.ವಿ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮೂಲಕ ಅತ್ಯಂತ ಕನಿಷ್ಠ ಶುಲ್ಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳು ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದೆ.

• ಡಿಜಿಟಲ್ ಮೌಲ್ಯಮಾಪನದ ಮೂಲಕ ಗುಣಮಟ್ಟದ ಮೌಲ್ಯಮಾಪನ, ಶೀಘ್ರ ಫಲಿತಾಂಶ ಪ್ರಕಟಣೆಗೆ ಅನುಕೂಲ ಮಾಡಲಾಗಿದೆ.

• ಕರಾಮುವಿಯ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳು ಬೆಂಗಳೂರಿನ ಅಧ್ಯಯನ ಕೇಂದ್ರದಲ್ಲಿಯೇ ನಡೆಯುತ್ತವೆ. ವಾರಾಂತ್ಯ ಸಂಪರ್ಕ ತರಗತಿಗಳನ್ನು ಮತ್ತು ವಿಜ್ಞಾನ ವಿಷಯಗಳಿಗೆ ಪ್ರಯೋಗಿಕ ತರಗತಿಗಳನ್ನು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ನಡೆಸಲು ಕ್ರಮವಹಿಸಲಾಗುವುದು.

• ವಿದ್ಯಾರ್ಥಿಗಳಿಗೆ ಗ್ರಂಥಾಲಯ ವ್ಯವಸ್ಥೆ ಇರುತ್ತದೆ.

ವಿದ್ಯಾರ್ಥಿಗಳ ಗೊಂದಲಗಳನ್ನು ಬಗೆಹರಿಸುವ ಸಲುವಾಗಿ ವಿಭಾಗವಾರು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.

• ಅಂಕಪಟ್ಟಿಗಳು ವಿದ್ಯಾರ್ಥಿಗಳ ವಿಳಾಸಕ್ಕೆ ರಿಜಿಸ್ಟರ್ ಅಂಚೆಯ ಮೂಲಕ ಕಳುಹಿಸಲಾಗುವುದು.

ರಾಜ್ಯಾದ್ಯಾಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿವೆ.

ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು/ಆಸಕ್ತರು ಹತ್ತಿರದ ಜಿಲ್ಲಾ ಪ್ರಾದೇಶಿಕ ಕೇಂದ್ರಗಳಿಗೂ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವಾನ್ವಿತ ಪ್ರೊ. ಶರಣಪ್ಪ, ವಿ ಹಲಸೆ, ರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ. ಪ್ರಾಚಿ ಗೌಡ, ಕರಾಮುವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಮಾನ್ಯ ಡೀನ್ (ಅಧ್ಯಯನ ಕೇಂದ್ರ) ರವರಾದ ಪ್ರೊ.ಎಂ. ರಾಮನಾಥಂ ನಾಯ್ಡು., ಶ್ರೀ ದಿಲೀಪ ಡಿ, ಪ್ರಾದೇಶಿಕ ನಿರ್ದೇಶಕರು, ಬಾಪೂಜಿನಗರ, ಬೆಂಗಳೂರು, ಶ್ರೀ ರೋಹಿತ್ ಹೆಚ್.ಎಸ್., ಪ್ರಾದೇಶಿಕ ನಿರ್ದೇಶಕರು, ಯಲಹಂಕ, ಬೆಂಗಳೂರು, ಇವರ ಜೊತೆಗೆ ಬೆಂಗಳೂರು ಹಾಗೂ ಬೆಂಗಳೂರು ವಲಯ ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಪ್ರಾದೇಶಿಕ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರುಗಳು ಹಾಜರಿದ್ದರು.

City Today News 9341997936

RV Education Institutions (RVEI) to adopt best training practices from Taiwan

Bengaluru: RV College of Engineering (RVCE) and RV-SKILLS, Center for Emerging Technologies established under RV Educational Institutions are exploring the possibilities of getting their students trained by semiconductor and other emerging technology companies in Taiwan.



Dr. Geetha, Vice Principal of RV College of Engineering and Mr. Basavaraj Nagaraju CEO of RV-SKILLS, were in Taiwan from August 25 to September 3. During the visit, they met the representatives of various companies and educational institutions to build a partnership for conducting training for the RV students. They identified partners in Taiwan to impart training in the best technologies and processes to their students. This would help in empowering meeting market demand.



Moreover, the industries have identified more than 50% business limitations for expanding and investing in semiconductor process is lack of skilled engineers. Dr. Geetha and Mr Nagaraju have visited the globally acclaimed National Tsing Hua University (NTHU), Minghisn University of Science and Technology, Hsinchu Science Park, Industrial Technology Research Institute (ITRI) and Taiwan Semiconductor Manufacturing Company (TSMC), among others. TSMC is one of the largest companies that supply more than 65% of the global chips. Its clients include Apple, Google, Nvidia, and Qualcomm.



Mr Nagaraju, while sharing the outcome of his ongoing visit in a statement, has said RV-SKILLS was the first training institute in India to invest and develop the industry-ready training programs. Now, it is planning to expand the training programs through collaborations with industry leaders in Taiwan. The goal is to equip RV-SKILLS and RVCE students, he added.
“We have identified emerging technologies, and we want our students to get trained in them. Taiwan has been successful in building a right ecosystem that matches the market demand because it has clear vision, focused investments, and appropriate infrastructure support,” he added.



He further pointed out that during his visits, he found that some of the universities, on their premises, have factory setups including fabrication facilities, packaging, testing, and assembly systems. This has been done ahead of the industry demand. They have collaborated with the industry as well as the government, he pointed out.



The RV Educational Institutions initiative comes at a time when India has made the semiconductor sector a priority one. The RVEI is studying the evolution and adoption of the latest technologies in its colleges’ infrastructure and curriculum. Taiwan’s commitment and progress in the sector is an eye-opener.



Dr K S Geetha, Vice Principal & professor, RVCE, said, “We want to adopt all the learning from universities in Taiwan. Meeting experts in the field has given insights. We are committed to making similar investments in our institutions in the coming days. RVCE has been pioneers in adopting new ideas and proactive with the industrial growth cycle. With semiconductors being the priority segment in the country and the world is also looking for China+1 strategy, we wanted to study Taiwan’s evolution and adoption of technologies related to the segment for India and for the world.”

City Today News 9341997936

ಕರ್ನಾಟಕದ ಟೆಕ್ ಉತ್ಸಾಹಿಗಳು ಮಸಾಯಿ ಶಾಲೆಯ PAP ಮಾದರಿಯೊಂದಿಗೆ ಯಶಸ್ಸನ್ನು ಕಂಡುಕೊಂಡಿದ್ದಾರೆ

ಆಗಸ್ಟ್ 16, 2024, ರಾಷ್ಟ್ರೀಯ: ಅವಕಾಶಗಳೊಂದಿಗೆ ಕೌಶಲ್ಯಗಳನ್ನು ಸಂಪರ್ಕಿಸುವ ಸೇತುವೆಯನ್ನು ನಿರ್ಮಿಸುವ ವೇದಿಕೆಯಾದ ಮಸಾಯಿ ಶಾಲೆಯು ಭಾರತದಾದ್ಯಂತ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದೆ. ಫಲಿತಾಂಶ-ಚಾಲಿತ ವೃತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ, ಇದು 100 ಕ್ಕೂ ಹೆಚ್ಚು ಬ್ಯಾಚ್‌ಗಳಿಗೆ ತರಬೇತಿ ನೀಡಿದೆ ಮತ್ತು ಕಳೆದ ವರ್ಷಗಳಿಂದ 6,000 ಪ್ರಸ್ತುತ ದಾಖಲಾತಿಗಳನ್ನು ಹೆಚ್ಚಿಸಿದೆ. ಈ ತಿಂಗಳಿಗೆ ಐದು ವರ್ಷಗಳನ್ನು ಪೂರ್ಣಗೊಳಿಸುವ ಮೂಲಕ, ಶಿಕ್ಷಣ ವ್ಯವಸ್ಥೆಯನ್ನು ಫಲಿತಾಂಶ-ಚಾಲಿತವಾಗಿ ಮಾಡುವ ಮೂಲಕ ಭಾರತದ ಮಾನವ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ಏಕೈಕ ಗುರಿಯನ್ನು ಪೂರೈಸಲು ಸಂಸ್ಥೆ ಖಚಿತಪಡಿಸಿದೆ..
ಮೊಹಮ್ಮದ್ ತನ್ವೀರ್ ಒಬ್ಬ ಉತ್ಸಾಹಭರಿತ ವ್ಯಕ್ತಿಯಾಗಿದ್ದು, ಇವರು ಕರ್ನಾಟಕದ ಬೆಂಗಳೂರಿನವರು. ಅನಿರೀಕ್ಷಿತ ಸಂದರ್ಭಗಳಿಂದಾಗಿ, ಕುಟುಂಬವನ್ನು ಪೋಷಿಸಲು ಅವರು ಐದನೇ ತರಗತಿಯಲ್ಲಿ ಶಾಲೆಯನ್ನು ಬಿಡಬೇಕಾಯಿತು. ಮಕ್ಕಳ ಕಾನೂನುಗಳು ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸುವವರೆಗೂ ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸೇವೆ ಸಲ್ಲಿಸಲು ಶ್ರಮಿಸಿದರು. ಅಡೆತಡೆಗಳು ಮತ್ತು ಸವಾಲುಗಳ ಹೊರತಾಗಿಯೂ, ತನ್ವೀರ್ ಶಿಕ್ಷಣದ ಕಡೆಗೆ ತನ್ನ ಉತ್ಸಾಹವನ್ನು ಪುನರುಜ್ಜೀವನಗೊಳಿಸಿದನು ಮತ್ತು ಅವರ ಸಹೋದರಿಯ ಬೆಂಬಲದೊಂದಿಗೆ, ಅವರು ಹೊಸ ಅವಕಾಶಗಳಿಗಾಗಿ ಮಸಾಯಿ ಕಡೆಗೆ ತಿರುಗಿದರು. ಮಸಾಯಿ ಅವರೊಂದಿಗಿನ ಪ್ರಯಾಣದ ಬಗ್ಗೆ ಮಾತನಾಡಿದ ಅವರು, “ನಾನು ಯಾವಾಗಲೂ ಐಟಿ ವಿಭಾಗದಲ್ಲಿ ಕೆಲಸ ಮಾಡಬೇಕೆಂದು ಕನಸು ಕಂಡೆ. ಅನಿರೀಕ್ಷಿತ ಘಟನೆಗಳಿಂದಾಗಿ ಶಿಕ್ಷಣವನ್ನು ಮುಂದುವರಿಸುವುದು ನನಗೆ ಅಸಾಧ್ಯವಾಯಿತು. ಮಸಾಯಿ ಸೇರಿದ ನಂತರ, ಎಲ್ಲವೂ ತಿರುಗಿತು, ಮತ್ತು ಎಲ್ಲವೂ ಸುಲಭ ಮತ್ತು ಹರಿವಿನಲ್ಲಿದೆ ಎಂದು ತೋರುತ್ತಿದೆ. ನಾನು ಮೂಲಭೂತ ಕೌಶಲ್ಯಗಳನ್ನು ಪುನಃ ಕಲಿತಿದ್ದೇನೆ ಮತ್ತು HTML, CSS, JavaScript ಮತ್ತು MERN ಸ್ಟಾಕ್ ಅನ್ನು ಕರಗತ ಮಾಡಿಕೊಂಡಿದ್ದೇನೆ.” ಮಸಾಯಿ ನಂತರ, ತನ್ವೀರ್ ಪ್ರಭಾವಶಾಲಿ ಸಂಬಳದೊಂದಿಗೆ ಇನ್‌ಫ್ಲಕ್ಸ್ ವರ್ಲ್ಡ್‌ವೈಡ್‌ನಲ್ಲಿ ಸಾಫ್ಟ್‌ವೇರ್ ಡೆವಲಪರ್ ರೋಲ್ ಅನ್ನು ಪಡೆದುಕೊಂಡರು, ಅವರ ವೃತ್ತಿಜೀವನವನ್ನು ಪರಿವರ್ತಿಸಿದರು ಮತ್ತು ಅವರ ಕುಟುಂಬಕ್ಕೆ ಹೆಮ್ಮೆ ತಂದರು.
ಕರ್ನಾಟಕದ ಬೆಂಗಳೂರಿನ ಸಚಿನ್ ಸಿವಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಓದುತ್ತಿದ್ದರು. ಕೋರ್ಸ್ ಮತ್ತು ಕಾಲೇಜು ಪಠ್ಯಕ್ರಮದಿಂದ ತೃಪ್ತರಾಗದ ಅವರು ತಮ್ಮದೇ ಆದ ವಿಭಿನ್ನ ಕೋರ್ಸ್‌ಗಳಲ್ಲಿ ಪ್ರಯೋಗಗಳನ್ನು ಮಾಡಿದರು. ಅವರು ಡಿಜಿಟಲ್ ಮಾರ್ಕೆಟಿಂಗ್, ವೆಬ್‌ಸೈಟ್ ಅಭಿವೃದ್ಧಿ ಮತ್ತು ಸಾಮಾಜಿಕ ಮಾಧ್ಯಮ ನಿರ್ವಹಣೆಯನ್ನು ಕಲಿತರು. ಅವರು ಕೋಡಿಂಗ್ (PHP) ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು ಆದರೆ ಸಂಕೀರ್ಣ ಪರಿಕಲ್ಪನೆಗಳೊಂದಿಗೆ ಹೋರಾಡಿದರು. ಮಸಾಯಿ ಅವರೊಂದಿಗಿನ ಪ್ರಯಾಣದ ಬಗ್ಗೆ ಮಾತನಾಡುತ್ತಾ, “ನಾನು ಮಸಾಯಿ ಬಗ್ಗೆ ಜಾಹೀರಾತಿನ ಮೂಲಕ ತಿಳಿದುಕೊಂಡೆ. ಅದರ ಪಠ್ಯಕ್ರಮ ಮತ್ತು ಮಾದರಿಯಿಂದ ಆಕರ್ಷಿತನಾದ ನಾನು ನನ್ನ ತಂದೆತಾಯಿಗಳೊಂದಿಗೆ ನನಗೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಒಂದು ವರ್ಷವನ್ನು ನೀಡುವಂತೆ ಅವರಲ್ಲಿ ವಿನಂತಿಸಿದೆ. ಸಂಸ್ಥಾಪಕರಲ್ಲಿ ಒಬ್ಬರಾದ ಯೋಗೇಶ್ ಸರ್ ನನ್ನ ಸಂದರ್ಶನವನ್ನು ತೆಗೆದುಕೊಂಡ ನಂತರ ನನ್ನನ್ನು ಆಯ್ಕೆ ಮಾಡಲಾಯಿತು. ನನ್ನ ಮಾರ್ಗದರ್ಶಕರಾದ ನೃಪುಲ್ ಮತ್ತು ಅಮನ್ ನನ್ನ ಉತ್ಸಾಹವನ್ನು ಹೆಚ್ಚಿಸಿದರು ಮತ್ತು ನನ್ನ ಪ್ರಯಾಣದುದ್ದಕ್ಕೂ ನನ್ನನ್ನು ಪ್ರೇರೇಪಿಸಿದರು. ಮಸಾಯ್‌ಗೆ ಸೇರಿದ ಆರು ತಿಂಗಳ ನಂತರ ನನಗೆ ಕೆಲಸ ಸಿಕ್ಕಿತು. ಪ್ರಸ್ತುತ, ನಾನು GoKwik ಗಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ML ಮತ್ತು AI ನಲ್ಲಿ ಮುನ್ನಡೆಯಲು ಬಯಸುತ್ತೇನೆ”.
ಮತ್ತೊಬ್ಬ ಹಳೆಯ ವಿದ್ಯಾರ್ಥಿ, ಅಕ್ಷಯ್ ಕದಂ ಕರ್ನಾಟಕದ ಜಮಖಂಡಿ ಮೂಲದವರಾಗಿದ್ದಾರೆ. ಗೇಮಿಂಗ್‌ನತ್ತ ಅವರ ಉತ್ಸಾಹವು ಅವರನ್ನು ತಂತ್ರಜ್ಞಾನದ ಕಲಿಕೆಯತ್ತ ಆಕರ್ಷಿಸಿತು. ಅಪಘಾತಕ್ಕೀಡಾದ ಅವರು ಉನ್ನತ ಶಿಕ್ಷಣ ಮತ್ತು ಬಿಟೆಕ್‌ನಲ್ಲಿ ಉತ್ತೀರ್ಣರಾಗಲು ಹಲವಾರು ಅಡಚಣೆಗಳನ್ನು ಎದುರಿಸಬೇಕಾಯಿತು. ಪದವಿ ಹೊಂದಿದ್ದರೂ, ಹಲವಾರು ಹಿನ್ನಡೆಗಳಿಂದಾಗಿ ಉದ್ಯೋಗಾವಕಾಶಗಳನ್ನು ಪಡೆಯುವುದು ಕಷ್ಟಕರವಾಗಿತ್ತು. ಹೊಸ ಆರಂಭಕ್ಕಾಗಿ ನೋಡುತ್ತಿರುವ ಅಕ್ಷಯ್ ರಚನಾತ್ಮಕ ಮಾರ್ಗದರ್ಶನಕ್ಕಾಗಿ ಆಶಿಸುತ್ತಾ ಮಸಾಯ್‌ಗೆ ಸೇರಿಕೊಂಡರು. ತಮ್ಮ ಅನುಭವವನ್ನು ಹಂಚಿಕೊಂಡ ಅವರು, “ಶಾಲೆಗಳು ಮತ್ತು ಕಾಲೇಜುಗಳಿಗಿಂತ ಭಿನ್ನವಾಗಿ, ಮಸಾಯಿಯು ವಿಭಿನ್ನ ಬೋಧನಾ ಮಾದರಿ ಮತ್ತು ಪಠ್ಯಕ್ರಮವನ್ನು ಹೊಂದಿದೆ. ಇದರ ಕಠಿಣ 9-9-6 ವೇಳಾಪಟ್ಟಿ ಮತ್ತು ಸಹಯೋಗದ ಯೋಜನೆಯು ಶಿಸ್ತಿನ ಬೇಡಿಕೆಗಳನ್ನು ಹೊಂದಿದೆ. ಮಸಾಯ್‌ನಲ್ಲಿ ನನ್ನ ಪ್ರಯಾಣದ ಉದ್ದಕ್ಕೂ, ನಾನು React.js, React Native ನಂತಹ ಹೊಸ ತಂತ್ರಜ್ಞಾನಗಳ ಬಗ್ಗೆ ಕಲಿತಿದ್ದೇನೆ ಮತ್ತು ಇತರ ತಂತ್ರಜ್ಞಾನಗಳನ್ನು ಶೀಘ್ರವಾಗಿ ತೆಗೆದುಕೊಂಡೆ. ಮೇ 2021 ರಲ್ಲಿ ಪದವಿ ಪಡೆದ 10 ದಿನಗಳಲ್ಲಿ ನಾನು ಅರ್ಬನ್ ಪೈಪರ್‌ನಲ್ಲಿ ಸ್ಥಾನವನ್ನು ಪಡೆದುಕೊಂಡೆ”.
ತೀವ್ರವಾದ ತರಬೇತಿ ಮತ್ತು ಪರಿಣಾಮಕಾರಿ ಮಾರ್ಗದರ್ಶನದ ಜೊತೆಗೆ, ಮಸಾಯಿ ಶಾಲೆಯು 4500 ಕ್ಕೂ ಹೆಚ್ಚು ನೇಮಕಾತಿ ಪಾಲುದಾರರನ್ನು ಹೊಂದಿದೆ, ಅವರ ವಿದ್ಯಾರ್ಥಿಗಳು ತಮ್ಮ ಅಪೇಕ್ಷಿತ ವೃತ್ತಿಜೀವನಕ್ಕೆ ಮನಬಂದಂತೆ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತದೆ. ಪಾಲುದಾರರನ್ನು ನೇಮಿಸಿಕೊಳ್ಳುವ ಈ ವ್ಯಾಪಕವಾದ ನೆಟ್‌ವರ್ಕ್, ಅದರ ಪದವೀಧರರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ, ಅವರ ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಇರಿಸುತ್ತದೆ.
ಮಸಾಯಿ ಶಾಲೆಯ ಬಗ್ಗೆ ಮಾತನಾಡುವಾಗ, ಮಸಾಯಿ ಶಾಲೆಯ ಸಿಇಒ ಮತ್ತು ಸಹ-ಸಂಸ್ಥಾಪಕ ಪ್ರತೀಕ್ ಶುಕ್ಲಾ, “ಕೌಶಲಗಳನ್ನು ತೀಕ್ಷ್ಣಗೊಳಿಸಲು ಮತ್ತು ಖಚಿತವಾದ ಫಲಿತಾಂಶಗಳೊಂದಿಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ನಾವು ವೇದಿಕೆಯನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಸ್ಥಾಪಿತ ಸಂಸ್ಥೆಗಳೊಂದಿಗೆ ಸಹಯೋಗದೊಂದಿಗೆ ಹೊಸ ಯೋಜನೆಗಳನ್ನು ಪರಿಚಯಿಸಲು ಮತ್ತು ತಂಡಗಳನ್ನು ವಿಸ್ತರಿಸಲು ನಾವು ಸಮರ್ಪಿತರಾಗಿದ್ದೇವೆ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ವಿಸ್ತರಿಸುತ್ತೇವೆ. ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಹಂತಹಂತವಾಗಿ ಪರಿವರ್ತಿಸುವುದನ್ನು ನಾವು ಕಲ್ಪಿಸಿಕೊಳ್ಳುತ್ತೇವೆ.”
ಉದ್ಯಮದಲ್ಲಿನ ಪ್ರಮುಖ ಸಂಸ್ಥೆಗಳೊಂದಿಗೆ ಕೈಜೋಡಿಸುವುದರ ಜೊತೆಗೆ, ಮಸಾಯಿ ಶಾಲೆಯು ಮೂರು ಐಐಟಿ ಸಂಸ್ಥೆಗಳೊಂದಿಗೆ ಸಹಯೋಗವನ್ನು ಅಭಿವೃದ್ಧಿಪಡಿಸಿದೆ, ಅಂದರೆ, ಐಐಟಿ ಗುವಾಹಟಿ, ಐಐಟಿ ಮಂಡಿ, ಮತ್ತು ಐಐಟಿ ರೋಪರ್ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಅಡೆತಡೆಗಳನ್ನು ಮುರಿಯುವುದು ಮತ್ತು ಸಾಧ್ಯವಿರುವ ಮಿತಿಗಳನ್ನು ತಳ್ಳುವುದು.

http://www.masaischool.com ನಲ್ಲಿ ಮಸಾಯಿ ಶಾಲೆಯ ಕುರಿತು ಇನ್ನಷ್ಟು ಓದಿ

City Today News 9341997936

Bengaluru branch of the BIS – two-days Mentors Training Program

Bangalore: The Bengaluru branch of the Bureau of Indian Standards (BIS), under the Ministry of Consumer Affairs, Food and Public Distribution, organized a two-day Residential Mentors Training Programme for teacher mentors of BIS Standards Clubs. This event was held at The Rialto Hotel on July 30th and 31st, 2024.



The programme was attended by 25 mentors from various districts of Karnataka, representing schools and colleges. The goal was to equip these mentors with the knowledge and skills needed to implement BIS-related activities within their institutions. This includes standards writing competitions, Quiz and organizing exposure visits to manufacturing and testing organizations.



Shri. Suresh Kumar K M, KAS, Joint Director, Department of Technical Education, Karnataka, highlighted the significance of standards in everyday life and discussed their impact on safety and quality of life. He encouraged participants to engage actively and maximize their learning from the experienced faculty. Additionally, he spoke about the Gross Enrollment Ratio in Karnataka, which is 36%, and advocated for Quality Management System certification for all educational institutes.



Shri Manjunatha K, Block Resource Coordinator, BEO, Bangalore North 1, served as the Guest of Honor. He urged attendees to use the BIS Care app to verify product authenticity and to promote the establishment of more Standards Clubs in Karnataka’s educational institutions.



Smt. Vinodini Kishore, Sc D and Joint Director at BIS, conducted technical sessions covering Quality and Standardization concepts, the BIS website and portals, and the BIS Care app.

The program also included discussions on roles and opportunities for teacher mentors, research scholars, and students in the domain of quality and standards. These sessions were conducted by BIS resource support team members Shri. S. D. Selvan, former Director (BIS), and Shri. Mohan Kumar, P. N. The event was coordinated by Smt. Pritha Roy, Standard Promotion Officer, along with the BIS Bengaluru team.

City Today News 9341997936

“ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ” ಆಂದೋಲನ ಸಮಿತಿಯ ಪರವಾಗಿ ಸರ್ಕಾರಕ್ಕೆ ಶಿಫಾರಸು.

ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ 4 ರಿಂದ 6 ವರ್ಷದ ಮಕ್ಕಳಿಗೆ ಎಲ್.ಕೆ.ಜಿ-ಯುಕೆಜಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಸುತ್ತೋಲೆ ಹೊರಡಿಸಿದೆ. ಇದುವರೆಗೂ ರಾಜ್ಯದಲ್ಲಿ 2524 ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸರ್ಕಾರದ ಐಸಿಡಿಎಸ್ ಯೋಜನೆಯಿಂದ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ. ಆದ್ದರಿಂದಲೇ ಕಳೆದ ಜೂನ್ 3 ರಿಂದ ರಾಜ್ಯವ್ಯಾಪಿ ಹೋರಾಟಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ ಜೂನ್ 19 ಮತ್ತು 20 ರಂದು ಬೃಹತ್ ಹೋರಾಟ ನಡೆದಿದೆ. ಶಿಕ್ಷಣ ಇಲಾಖೆಯವರ ವಾದ ಏನೆಂದರೆ, ಬಡವರ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು. ಒಂದನೇ ತರಗತಿಗೆ ಬರುವ ಮಗು ಶಾಲಾ ವ್ಯವಸ್ಥೆಗೆ ಸಿದ್ಧವಾಗಿರಬೇಕು ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಬೇಕು, ಆದ್ದರಿಂದ ಮಕ್ಕಳು 4 ವರ್ಷದಿಂದ ಮೇಲ್ಪಟ್ಟವರಿರುವಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬುದಾಗಿದೆ.

ಯಾವುದೇ ಮಗುವಿನ 40% ದೈಹಿಕ ಬೆಳವಣಿಗೆ 85% ಮಾನಸಿಕ ಬೆಳವಣಿಗೆಯಾಗುವ ಸಂದರ್ಭದಲ್ಲಿ ಲಾಲನೆ-ಪಾಲನೆ. ಪೋಷಣೆ ಮತ್ತು ಶಿಕ್ಷಣವನ್ನು ಕೊಡುವ ಸಲುವಾಗಿಯೇ 1975 ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ, ಅಂಗನವಾಡಿ ಕೇಂದ್ರದ ಪರಿಕಲ್ಪನೆ ಕೂಡ ಬಂದಿರುವುದು. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಮೇಲಿನ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3- 4 ವರ್ಷದ ಮಕ್ಕಳು ಮಾತ್ರವೇ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. 49 ವರ್ಷಗಳಿಂದ ಸರ್ಕಾರದ ಮಾರ್ಗದರ್ಶನದಲ್ಲಿಯೇ ಐಸಿಡಿಎಸ್ ಮೂಲಕ ನಡೆಸಲಾಗುತ್ತಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಎಲ್ಲಾ ಅಂಶಗಳನ್ನು ಒಳಗೊಂಡ ಶಾಲಾಪೂರ್ವ ಶಿಕ್ಷಣಕ್ಕೆ ಗಂಭೀರವಾಗಿ ಧಕ್ಕೆಯಾಗುತ್ತದೆ. ಈ ಯೋಜನೆ ಯಾವಾಗ ಬೇಕಾದರೂ ಕುಸಿದು ಕಣ್ಮರೆಯಾಗುವ ಸಾಧ್ಯತೆ ಇದೆ.

ಆದ್ದರಿಂದ ನಾವು “ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ” ಆಂದೋಲನ ಸಮಿತಿಯ ಪರವಾಗಿ ಈ ಕೆಳಕಂಡ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡುತ್ತಿದ್ದೇವೆ.

1. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಚರ್ಚಿಸದೆ ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಈ ಸುತ್ತೋಲೆಗಳಿಂದ ಆಗಿರುವ ಗೊಂದಲವನ್ನು ನಿವಾರಿಸಲು, ಎರಡೂ ಇಲಾಖೆಗಳು ಪರಸ್ಪರ ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ, ಎರಡೂ ಇಲಾಖೆಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿಯ ತನಕ 11-6-2024 ರ ಮತ್ತು 14-05-2024 ರ ಆದೇಶಗಳನ್ನು ತಡೆಹಿಡಿಯಬೇಕು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ 7 ಜಿಲ್ಲೆಗಳ ವ್ಯಾಪ್ತಿಯನ್ನೂ ಒಳಗೊಂಡು ರಾಜ್ಯದ ಎಲ್ಲಿಯೂ ಜಾರಿಯಾಗಬಾರದು.

2 . ಅಂಗನವಾಡಿ ಕೇಂದ್ರದ ಹೆಸರು ‘ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ’ ಎಂದು ಪರಿವರ್ತಿಸುವುದು.

3. PUC ಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿರುವ ಮತ್ತು ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಳ್ಳುವುದು.

4. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡುವುದು.

5. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಪೂಗಳನ್ನು ನೀಡುವುದು.

6. ECCE ನೀಡಿದ ಮಗುವಿಗೆ T.C ಕೊಡುವ ವ್ಯವಸ್ಥೆ ತರಬೇಕು.

7. ಅಂಗನವಾಡಿ ಕಾರ್ಯಕರ್ತರನ್ನು “ಶಿಕ್ಷಕಿ” ಎಂದು ಹೆಸರಿಸಿ ಪದನಾಮ ಬದಲಿಸುವುದು.

8. ICDS ನಲ್ಲಿರುವ ECCE ಗೆ ಅನುದಾನವನ್ನು ನಿರಂತರವಾಗಿ ಹೆಚ್ಚಳ ಮಾಡುವುದು.

9. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಈ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡುವುದು.

10. ECCE ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡುವ ಬಗ್ಗೆ ಕಾನೂನು ರೂಪಿಸುವುದು.

11. ಅಂಗನವಾಡಿ ಕಾರ್ಯಕರ್ತೆಯರನ್ನು ನಿರಂತರವಾಗಿ ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸುವುದು. (ಚುನಾವಣಾ ಕೆಲಸಗಳಿಗೆ ನಿವೃತ್ತ ಅಂಗನವಾಡಿ ನೌಕರರನ್ನು ಬಳಸಬಹುದು).

12. ICDS ಯೋಜನೆಯನ್ನು ಪ್ರತ್ಯೇಕ ನಿರ್ದೇಶನಾಲಯವಾಗಿ ಪರಿವರ್ತಿಸಬೇಕು ಎಂದು ಪ್ರೊ. ಟಿ. ಆರ್. ಚಂದ್ರಶೇಖರ ಡಾ. ವಿಜಯಮ್ಮ,ಬಡಗಲಪುರ ನಾಗೇಂದ್ರ,ಬಿ. ಶ್ರೀಪಾದ ಭಟ್,ಕೆ.ಎಸ್. ವಿಮಲಾ, ಶಶಾಂಕ್,ಎಸ್. ವರಲಕ್ಷ್ಮಿ, ಎಚ್. ಎಸ್. ಸುನಂದಾ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಪ್ರಕಟಣೆಯಲ್ಲಿ ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ ಆಂದೋಲನ ಸಮಿತಿಯ ಪರವಾಗಿ ತಿಳಿಸಿದರು.

City Today News 9341997936