ಡಾ . ವಿ . ರಾಘವೇಂದ್ರ ರಾವ್ , ರಾಜ್ಯ ವಕ್ತಾರ , ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ರವರು ವಕ್ತಾರ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ

ಡಾ . ವಿ . ರಾಘವೇಂದ್ರ ರಾವ್ , ರಾಜ್ಯ ವಕ್ತಾರ , ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) , ರಾಜ್ಯ ವಕ್ತಾರ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಾನು ನನ್ನ ಹದಿಹರೆಯದಿಂದಲೂ ಜನತಾ ಪಕ್ಷದ ಕಾರ್ಯಕರ್ತನಾಗಿ , ಸಮಾಜವಾದಿ ಜನತಾಪಕ್ಷದ ಕಾರ್ಯಕರ್ತನಾಗಿ , ಸಮಾಜವಾದಿ ಜನತಾಪಕ್ಷ , ಜನತಾದಳ ಹಾಗೂ ಜನತಾದಳ ( ಜಾತ್ಯತೀತ ) ಪಕ್ಷದಲ್ಲಿ , ತಮ್ಮ ನೇತೃತ್ವದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತೇನೆ . | 1996ರಿಂದಲೂ ಬೇಗೂರು ಹೋಬಳಿ ಪ್ರಧಾನ ಕಾರ್ಯದರ್ಶಿಯಾಗಿ , ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ , ಬೆಂಗಳೂರು ನಗರ ಮಾಧ್ಯಮ ಕಾರ್ಯದರ್ಶಿಯಾಗಿ , ವಕ್ತಾರವಾಗಿ , ಬೆಂಗಳೂರು ನಗರ ಉಪಾಧ್ಯಕ್ಷನಾಗಿ ಹಾಗೂ ರಾಜ್ಯ ವಕ್ತಾರನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿರುತ್ತೀರಿ . ಇದಕ್ಕಾಗಿ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನ .

ಆದರೆ 2018ರ ಮೇ ತಿಂಗಳಲ್ಲಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರ ಕಡೆಗಣನೆ ಹಾಗೂ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡದೆ ಇರುವುದು ಹಲವಾರು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ . ಇಷ್ಟು ವರ್ಷಗಳು ಅಂದರೆ 1985ರಿಂದ ಇಲ್ಲಿಯವರೆಗೂ ಪಕ್ಷ ಬದಲಾವಣೆ ಮಾಡದ ತಮಗೆ ನಿಷ್ಠನಾಗಿ , ಕಾಯಾ , ವಾಚಾ , ಮನಸಾ , ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದ ನನಗೆ ಹಾಗೂ ಕಾರ್ಯಕರ್ತರಿಗೂ ಗೌರವ ದೊರೆಯದಿರುವುದರಿಂದ ಬೇಸರಗೊಂಡು ಪಕ್ಕದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಕ್ತಾರ ಸ್ಥಾನಕ್ಕೆ ಈ ದಿನ ರಾಜಿನಾಮೆ ನೀಡುತ್ತಿದ್ದೇನೆ . ಇಷ್ಟು ವರ್ಷಗಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷಕ್ಕೂ ಹಾಗೂ ತಮಗೂ ಅನಂತಾನಂತೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ , ನನ್ನ ರಾಜಿನಾಮೆಯನ್ನು ಅಂಗೀಕರಿಸಬೇಕಾಗಿ ಕೋರುತ್ತೇನೆ ಎಂದು ಸನ್ಮಾನ್ಯ ಶ್ರೀ ಹೆಚ್ . ಡಿ . ದೇವೇಗೌಡರವರಿಗೆ , ರಾಷ್ಟ್ರೀಯ ಅಧ್ಯಕ್ಷರು , ಜನತಾದಳ ( ಜಾತ್ಯತೀತ ) ರವರಿಗೆ ಪತ್ರದ ಮೂಲಕ ತಿಳಿಸಿರುತ್ತಾರೆ.

City Today News

(citytoday.media)

9341997936

ದ್ವಿ ಚಿಕ್ಕವಾದನ ಕಳುವು ಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ , 9 ವಾಹನಗಳ ವಶ ,

ದ್ವಿ ಚಿಕ್ಕವಾದನ ಕಳುವು ಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ , 9 ವಾಹನಗಳ ವಶ , NANDINILAYOUT POLICE STATION MLALLESHWARASISLB DIVISION NORTH DIVISION , BENGALURU CITY ಪಿರಾದುದಾರರಾದ ಶ್ರೀ ರವಿ , 49 ವರ್ಷ ರವರು ದಿನಾಂಕ 16 – 03 – 2019 ರಂದು ಸಂಜೆ 06 – 00 ಗಂಟೆಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಮುಂಭಾಗ ನಿಲ್ಲಿಸಿದ್ದು , ಮರುದಿನ ಬೆಳಿಗ್ಗೆ ನೋಡಲಾಗಿ ಸದರಿ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವು ಈ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದ ಆರೋಪಿಗಳಾದ 1 ) ಚಂದು . ಆರ್ @ ಕುಳ್ಳ ಚಂದು , 19 ವರ್ಷ , ಲಗ್ಗೆರೆ , ಬೆಂಗಳೂರು . 2 ) ವೇಣುಗೋಪಾಲ @ ವೇಣು , 19 ವರ್ಷ , ಲಗ್ಗೆರೆ , ಬೆಂಗಳೂರು . 3 ) ಶಂಕರ , 19 ವರ್ಷ , ಕುರುಬರಹಳ್ಳಿ , ಮಹಾಲಕ್ಷ್ಮಿಲೇಔಟ್ , ಬೆಂಗಳೂರು ಎಂಬುವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು ರೂ . 2 . 02 ಲಕ್ಷ ಬೆಲೆ ಬಾಳುವ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ .

ಆರೋಪಿಗಳ ದಸ್ತಗಿರಿಯಿಂದ ನಂದಿನಿಲೇಔಟ್ , ಮಹಾಲಕ್ಷ್ಮಿಲೇಔಟ್ – 2 , ಬಸವೇಶ್ವರನಗರ ಪೊಲೀಸ್ ಠಾಣೆಯ – 1 ಒಟ್ಟು 9 ದ್ವಿಚಕ್ರ ವಾಹನಗಳು ಪತ್ತೆಯಾಗಿರುತ್ತವೆ . ಈ ಪ್ರಕರಣದಲ್ಲಿ ಮಲ್ಲೇಶ್ವರಂ ಶ್ರೀ ಧನಂಜಯ . ಬಿ ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಂದಿನಿಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ , ಶ್ರೀ ಲೋಹಿತ್ ಬಿ . ಎನ್ . ಪಿ . ಐ . , ರವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀ ಸಿ . ಲಕ್ಷ್ಮಣ್ , ಹೆಚ್ . ಸಿ . 9172 ಶ್ರೀ ಉಮೇಶ್ , ಪಿ . ಸಿ . 7616 ಶ್ರೀ . ಸಿದ್ದರಾಮಣ್ಣ , ಪಿಸಿ 17215 ಬಸವರಾಜು , ಪಿಸಿ 17157 ಶ್ರೀ . ಪ್ರಸಾದ್ , ಪಿಸಿ 15630 ಶ್ರೀ . ಬಸವಣ್ಣ , ಪಿಸಿ . 17161 ಶ್ರೀ . ಸುಭಾಷ್ , ಪಿಸಿ . 17180 ಶ್ರೀ ಉಮೇಶ್ ರವರುಗಳು ಆರೋಪಿಗಳನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

ಎಸಿಬಿಯಿಂದ ಭ್ರಷ್ಟಾಚಾರ ಆರೋಪಿತ 04 ಅಧಿಕಾರಿಗಳ ವಿರುದ್ಧ ದಾಳಿ ಎಸಿಬಿ ಬೆಂಗಳೂರು ನಗರದ ವಿಭಾಗ & ಉತ್ತರ ವಲಯದ ತಂಡಗಳಿಂದ 10 ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ

ದಿನಾಂಕ : 19 . 03 . 2019 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 4 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ – ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ದಾಳಿ ನಡೆಸಿರುತ್ತದೆ . ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಈವರೆಗೆ ಪತ್ತೆಯಾದ ಆರೋಪಿತ ಸರ್ಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ .

1 . ಶ್ರೀ . ಸತೀಶ್ ಐ . ಸಿ , ಸಹಕಾರ ಸಂಘಗಳ ಅಪರ ನಿಬಂಧಕರು , ಸಹಕಾರ ಇಲಾಖೆ , ಕೇಂದ್ರ ಕಛೇರಿ , ಅಅ ಅಸ್ತರ್‌ ರಸ್ತೆ , ಬೆಂಗಳೂರು . ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 1 ಮನೆ , 2 ನಿವೇಶನ , ಚಿನ್ನ 1 ಕೆಜಿ , ಬೆಳ್ಳಿ 20 ಕೆಜಿ 900 ಗ್ರಾಂ , 1 ಕಾರ್ , 1 ದ್ವಿಚಕ್ರ ವಾಹನ , ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ 1 3 . 84 ಲಕ್ಷ , 1 34 . 16 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ ಇನ್ನು ಪರಿಶೀಲಿಸಬೇಕಾಗಿರುವ 1 ಲಾಕರ್ ಪತ್ತೆಯಾಗಿರುತ್ತದೆ .

2 ಶ್ರೀ . ಶರದ್ ಗಂಗಪ್ಪ ಇಜ್ರ , ಉಪ ನಿರ್ದೇಶಕರು , ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ , ವಿಜಯಪುರ ( ಕೆ . ಆರ್ . ಐ . ಡಿ . ಎಲ್ ) ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ , 1 ಫ್ಲಾಟ್ , ವಿವಿಧ ಸರ್ವೆ ನಂಬರ್‌ಗಳಲ್ಲಿ 32 ಎಕರೆ 24 ಗುಂಟೆ ಕೃಷಿ ಜಮೀನು , ಚಿನ್ನ 675 ಗ್ರಾಂ , ಬೆಳ್ಳಿ 12 . 5 ಕೆಜಿ , 3 ಕಾರ್ , 3 ದ್ವಿಚಕ್ರ ವಾಹನಗಳು , 7 42 . 66 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 1 3 . 97 ಲಕ್ಷ , ಠೇವಣಿಗಳು 1 2 . 6 ಲಕ್ಷ ಹಾಗೂ 6 . 37 ಲಕ್ಷ ಮೊತ್ತದ ವಿಮೆ ಪಾಲಿಸಿಗಳು ಹಾಗೂ 1 ಲಾಕರ್ ಕಂಡು ಬಂದಿರುತ್ತದೆ .

3 . ಶ್ರೀ . ಪ್ರಕಾಶ್ ಗೌಡ ಕುದರಿಮೋಟ , ಕೃಷಿ ಅಧಿಕಾರಿ , ರೈತ ಸಂಪರ್ಕ ಕೇಂದ್ರ ಮುಂಡರಗಿ , ಗದಗ ಜಿಲ್ಲೆ . ತಮ್ಮ ಹೆಸರಿನಲ್ಲಿ ಮುಂಡರಗಿಯಲ್ಲಿ 2 ಮನೆ , 3 ನಿವೇಶನ , ಕುಕನೂರಿನಲ್ಲಿ 5 ಎಕರೆ ಮತ್ತು ಹರಲಾಪುರದಲ್ಲಿ 4 . 29 ಎಕರೆ ಮತ್ತು ಹಳ್ಳಿಗುಡ್ಡಿ ಗ್ರಾಮದಲ್ಲಿ 7 . 31 ಕೃಷಿ ಜಮೀನು , ಚಿನ್ನ 570 ಗ್ರಾಂ , ಬೆಳ್ಳಿ 2 ಕೆಜಿ 290 ಗ್ರಾಂ , 1 ಕಾರ್ . 2 ದ್ವಿಚಕ್ರ ವಾಹನ ಕಂಡು ಬಂದಿರುತ್ತದೆ .

4 . ಶ್ರೀ . ಮಂಜುನಾಥ್ ಎಸ್ . ಐ , ಸಹಾಯಕ ಕಂದಾಯ ಅಧಿಕಾರಿ , ಜೆ . ಬಿ . ನಗರ ಉಪ ವಿಭಾಗ , ಬಿಬಿಎಂಪಿ , ಬೆಂಗಳೂರು . ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ , 4 ನಿವೇಶನ , ಚನ್ನರಾಯಪಟ್ಟಣದ ಬಿ . ಎಂ ರಸ್ತೆಯಲ್ಲಿ 1 ಮನೆಯೊಂದಿಗೆ ವಾಣಿಜ್ಯ ಸಂಕೀರ್ಣ , ಹಾಸನದಲ್ಲಿ 13 ಗುಂಟೆ ಜಮೀನು , ಚಿನ್ನ 453 ಗ್ರಾಂ , ಬೆಳ್ಳಿ 1 ಕೆಜಿ 230 ಗ್ರಾಂ , 1 ಕಾರ್ , 1 ದ್ವಿಚಕ್ರ ವಾಹನ , ನಗದು { 4 . 26 ಲಕ್ಷ ಮತ್ತು { 19 ಲಕ್ಷ ಗೃಹೋಪಯೋಗಿ ವಸ್ತುಗಳು , 2 ಲಾಕರ್‌ಗಳು ಪತ್ತೆಯಾಗಿರುತ್ತದೆ . ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ – ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ .

City Today News

(citytoday.media)

9341997936

ಕೆಐಎಡಿಬಿಯಲ್ಲಿಅಧಿಕಾರಿಗಳ ದರ್ಪ: “ನಕಲಿ ದಾಖಲೆ ಸೃಷ್ಟಿಸಿಪರಿಶಿಷ್ಟ ಜಾತಿಯ ಮೀಸಲುಹುದ್ದೆ  ಕಬಳಿಕೆ” ತನಿಖೆಗೆ – ಮಾವಳ್ಳಿ ಶಂಕರ್ ಆಗ್ರಹ

ಕೆಐಎಡಿಬಿಯಲ್ಲಿಅಧಿಕಾರಿಗಳ ದರ್ಪ:

ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿಯ ಮೀಸಲುಹುದ್ದೆ ಕಬಳಿಕೆ; ತನಿಖೆಗೆ ಮಾವಳ್ಳಿ ಶಂಕರ್ ಆಗ್ರಹ

ಬೆಂಗಳೂರು, ಮಾ.7;
ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಲ್ಲಿಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳ ಮೇಲೆ ಮಿತಿ ಮೀರಿದ ದೌರ್ಜನ್ಯ ನಡೆಯುತ್ತಿದೆ. ಇದರಿಂದ ಹಲವು ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ಮುಂಬಡ್ತಿಗೆ ಅವಕಾಶವಿದ್ದರೂ ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮುಖಂಡ ಮಾವಳ್ಳಿ ಶಂಕರ್ ಆರೋಪಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಅಭಿವೃದ್ಧಿನಿಗಮ (ಕೆಐಎಡಿಬಿ) ಪರಿಶಿಷ್ಟ ಜಾತಿ,ಪಂಗಡಕ್ಕೆ ಮೀಸಲಿರುವ ಹುದ್ದೆಗೆಕುರುಬ ಜನಾಂಗ ಎಂ. ರಾಮ ಎಂಬುವವರು ನಕಲಿ ದಾಖಲೆ ಸಲ್ಲಿಸಿ ನೇಮಕಗೊಂಡಿದ್ದಾರೆ. ಸಂಬಂಧಉನ್ನತ ಮಟ್ಟದ ತನಿಖೆ ನಡೆಸ ಬೇಕು
ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಐಎಡಿಬಿಯಲ್ಲಿ ಎರಡು ಸಹಾಯಕ ಅಭಿಯಂತರ ಹುದ್ದೆಗಳನ್ನು ಪರಿಶಿಷ್ಟ ಜಾತಿ,ಪಂಗಡಕ್ಕೆ ಮೀಸಲಿರಿಸಲಾಗಿದೆ. ಆದರೆ,ಎಂ.ರಾಮ ಎಂಬುವರು ಕಾನೂನು ಬಾಹಿರವಾಗಿ ಒಂದು ಹುದ್ದೆಯನ್ನು ಪಡೆದಿದ್ದು, ಸಂಬಂಧತನಿಖೆ ನಡೆಸುವಂತೆ ಸಮಾಜಕಲ್ಯಾಣ ಇಲಾಖೆಗೆ ಮನವಿಸಲ್ಲಿಸಿದ್ದೆವು.ಆದರೆ, ಇಲ್ಲಿಯವರೆಗ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಗೆ, ಇವರು ಮಂಡಳಿಯ ಅಧಿಕಾರಿಗಳನ್ನು ಹೆದರಿಸಿ ಅಭಿವೃದ್ಧಿ ಅಧಿಕಾರಿಯಾಗಿ ಮುಂಬಡ್ತಿಪಡೆದಿದ್ದಾರೆ. ಸಂಬಂಧ ಕೆಲವರು ಲೋಕಾಯುಕ್ತ ಇಲಾಖೆಗೆ ದೂರುಸಲ್ಲಿಸಿದ್ದರು. ಲೋಕಾಯುಕ್ತರಆದೇಶದಂತೆ ವಿಚಾರಣೆ ನಡೆಸಿ,ಆರೋಪ ರುಜುವಾತಾಗಿದ್ದರೂ,ಯಾವುದೇ ಕ್ರಮ ಜರುಗಿಸಿಲ್ಲ.ಹೈಕೋರ್ಟ್ ಕೂಡ ಎಂ.ರಾಮಅವರಿಗೆ ನೀಡಿದ ಮುಂಬಡ್ತಿಯನ್ನುಅನುರ್ಜಿತಗೊಳಿಸುವಂತೆ ಆದೇಶನೀಡಿದೆ. ಅದನ್ನೂ ಕೂಡ ಇಲಾಖೆಪಾಲಿಸಿಲ್ಲ ಎಂದು ಕಿಡಿಕಾರಿದರು.
ಕೂಡಲೇ ರಾಮು ಅವರನ್ನು ಮಂಡಳಿ ಸೇವೆಯಿಂದ ವಜಾಗೊಳಿಸಿ,ಅವರು ಅಕ್ರಮವಾಗಿ ಸಂಪಾದಿಸಿದ300 ಕೋಟಿಗೂ ಹೆಚ್ಚು ಆಸ್ತಿಯವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ, ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿದೆ. ಮುಖ್ಯಕಾರ್ಯದರ್ಶಿ ಅವರಿಗೆ ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ. ಆದರೆ ಇದುವರೆಗೆ ತನಿಖೆ ನಡೆದಿಲ್ಲ.ಕೈಗಾರಿಕಾ ಇಲಾಖೆಯಲ್ಲಿ ಇವರ ಅಕ್ರಮ ನೇಮಕಾತಿ ಬಗ್ಗೆ ತನಿಖೆನಡೆಸಿ ನೀಡಿರುವ ವರದಿ ಮಾಯವಾಗಿರುವುದು ವಿಪರ್ಯಾಸ ಎಂದರು.

ಹಿರಿಯ ಅಧಿಕಾರಿಗಳನ್ನು ಬೆದರಿಸಿತಮಗೆ ಬೇಕಾದಂತೆ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.ಇದಕ್ಕೆ ತಾಜಾ ಉದಾಹರಣೆ ಎಂದರೆವಿ. ಜಗನ್ನಾಥ್ ಮತ್ತು ಸಿ.ವಿ.ಶ್ರೀನಿವಾಸ ಎಂಬುವರು ಉಪಅಭಿವೃದ್ಧಿ ಅಧಿಕಾರಿಯಾಗಿ ನೇರನೇಮಕಾತಿಯಡಿ ಕೆಲಸಕ್ಕೆ ಸೇರಿದ್ದರು.ಆದರೆ ಇವರ ಹುದ್ದೆ ಇದೀಗ ಸಹಾಯಕ ಅಭಿಯಂತರ ಹುದ್ದೆಗಿಂತಮೇಲ್ಮಟ್ಟದ್ದಾಗಿದೆ ಎಂದು ಮಾವಳ್ಳಿಶಂಕರ್ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಂಚಾಲಕರಾದ ಲಕ್ಷ್ಮೀ ನಾರಾಯಣನಾಗವಾರ, ಗುರುಪ್ರಸಾದ್ಕೆರಗೋಡು, ರಾಜ್ಯ ಸಂಘಟನಾಸಂಚಾಲಕ ಸಿದ್ಧಲಿಂಗಯ್ಯಉಪಸ್ಥಿತರಿದ್ದರು.

City Today News

(citytoday.media)

9341997936