ಯೂರೋಪಿನಲ್ಲಿ ಛಾಪು ಮೂಡಿಸಲು ವೆಂಚರ್ ಕ್ಯಾಟಲಿಸ್ಟ್ಸ್ ತೀರ್ಮಾನ

ಬೆಂಗಳೂರು, ಫೆಬ್ರವರಿ, 2019- ಭಾರತದ ನವೋದ್ಯಮಗಳ ಪಾಲಿಗೆ ಸಮಗ್ರ ಪರಿಪೋಷಣಾ ಕೇಂದ್ರವಾಗಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಜಾಗತಿಕ ನವೋದ್ಯಮ (ಸ್ಟಾರ್ಟಪ್) ಕೇಂದ್ರವಾದ ಇಂಗ್ಲೆಂಡಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ತೀರ್ಮಾನಿಸಿದೆ.

ಈ ಬಗ್ಗೆ ಮಾತನಾಡಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಅನುಜ್ ಗೊಲೇಚ ಇದೇ ಮೊದಲ ಬಾರಿಗೆ ನವೋದ್ಯಮಗಳಲ್ಲಿ ಹಣ ಹೂಡುವವರನ್ನು ಯೂರೋಪ್-ಏಷ್ಯಾ ಮಟ್ಟದಲ್ಲಿ ಉತ್ತೇಜಿಸಲು ನಾವು ಹೆಸರಾಂತ ವೆಂಚರ್ ಕ್ಯಾಪಿಟಲ್ ಉದ್ದಿಮೆಯಾದ ಜೆಪಿಐಎನ್ ಜತೆ ಸಹಭಾಗಿತ್ವ ಹೊಂದಿದ್ದೇವೆ,’’ ಎಂದಿದ್ದಾರೆ.

ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಈಗಾಗಲೇ 2019 ಮತ್ತು 2020ರ ನೀಲಿನಕಾಶೆಯನ್ನು ಅಭಿವೃದ್ಧಿ ಪಡಿಸಿದೆ. ಈ ವರ್ಷ ಎಚ್ಎನ್ಐ/ಕಾರ್ಪೊರೇಟ್ ಸಂಸ್ಥೆಗಳನ್ನು ಒಳಗೊಂಡಿರುವ 150ಕ್ಕೂ ಹೆಚ್ಚು ಹೂಡಿಕೆದಾರರ ಜಾಲವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮುಂದಿನ ವರ್ಷ ಹೂಡಿಕೆದಾರರ ಈ ಜಾಲದಲ್ಲಿ 500ಕ್ಕೂ ಹೆಚ್ಚು ಸದಸ್ಯರಿರುವಂತೆ ಮಾಡಲಾಗುವುದು,’’ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಆರಂಭಿಕ ಹಂತದಲ್ಲಿ ನವೋದ್ಯಮಗಳಿಗೆ 125ರಿಂದ 150 ಕೋಟಿ ರೂ.ಗಳ ನಿಧಿಯನ್ನು ಪೂರೈಸಲಾಗುವುದು. ಮುಂದಿನ ಹಂತಗಳಲ್ಲಿ ಇದನ್ನು 250 ಕೋಟಿ ರೂ.ಗಳಿಗೆ ಏರಿಸಲಾಗುವುದು,’’ ಎಂದು ಗೊಲೇಚ ಹೇಳಿದ್ದಾರೆ.

ಅಲ್ಲದೆ, ನಮ್ಮ ಸಂಸ್ಥೆಯು ಸದ್ಯಕ್ಕೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅಗ್ರಗಣ್ಯ ಸಂಸ್ಥೆಯಾಗಿದ್ದು, ಏಷ್ಯಾ ಖಂಡದ ಮಟ್ಟದಲ್ಲಿ ಮುಂಚೂಣಿ ಐದು ಸ್ಥಾನಗಳಲ್ಲಿ ಒಂದನ್ನು ನಮ್ಮದಾಗಿಸಿಕೊಂಡಿದ್ದೇವೆ. ಜಗತ್ತಿನಲ್ಲಿ ಮೂರನೇ ಅತ್ಯಂತ ದೊಡ್ಡ ತಂತ್ರಜ್ಞಾನದ ಆಡುಂಬೊಲವಾಗಿರುವ ಲಂಡನ್, ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಬೆಳವಣಿಗೆಗೆ ತಕ್ಕ ವಾತಾವರಣವನ್ನು ಒದಗಿಸಲಿದೆ,’’ ಎಂದು ಅವರು ಹೇಳಿದ್ದಾರೆ.ಅತ್ಯಧಿಕ ಬಂಡವಾಳ ಕ್ರೋಡೀಕರಣ, ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆ ಮತ್ತು ವಿನೂತನ ವಾಣಿಜ್ಯ ವಹಿವಾಟು ಪರಿಕಲ್ಪನೆಗಳ ಆವಿಷ್ಕಾರವು ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಶಕ್ತಿಗಳಾಗಿವೆ. ಯೂರೋಪ್ ಖಂಡದಲ್ಲಿ ಮೊದಲಿಗೆ ಲಂಡನ್ ನಗರದಲ್ಲಿ ನಾವು ಛಾಪು ಮೂಡಿಸಲಿದ್ದು, ನಂತರ ಇಡೀ ಯೂರೋಪಿನಾದ್ಯಂತ ನೆಲೆಯೂರುವ ಗುರಿ ಇಟ್ಟುಕೊಂಡಿದ್ದೇವೆ,’’ ಎಂದು ನಯನ್ ಗೊಲೇಚ ಭರವಸೆ ವ್ಯಕ್ತಪಡಿಸಿದ್ದಾರೆ.

ವೆಂಚರ್ ಕ್ಯಾಟಲಿಸ್ಟ್ಸ್ ಜೊತೆಗಿನ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಜೆಪಿಐಎನ್ ವ್ಯವಸ್ಥಾಪಕ ನಿರ್ದೇಶಕ ನಯನ್ ಗಾಲಾ, ನವೋದ್ಯಮಗಳ ಅಗಾಧ ಬೆಳವಣಿಗೆಗೆ ಮತ್ತು ರಚನಾತ್ಮಕ ಸಹಭಾಗಿತ್ವಕ್ಕೆ ಯೂರೋಪ್-ಏಷ್ಯಾ ವಲಯದ ಕಾರಿಡಾರ್ ಅನಿವಾರ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ವಾಣಿಜ್ಯ ವಹಿವಾಟು ವೃದ್ಧಿಸಿದ್ದು ಸದ್ಯಕ್ಕೆ ಇದು 20 ಶತಕೋಟಿ ಪೌಂಡ್ ಗಳಷ್ಟಿದೆ. ಹೀಗಾಗಿ, ಯೂರೋಪ್-ಏಷ್ಯಾ ಕಾರಿಡಾರ್ ವಲಯದ ಹೂಡಿಕೆದಾರರಿಗೆ ತಕ್ಕ ವೇದಿಕೆ ಒದಗಿಸುವ ಸಲುವಾಗಿ ವೆಂಚರ್ ಕ್ಯಾಟಲಿಸ್ಟ್ಸ್ ಜತೆ ಕೈ ಜೋಡಿಸಿದ್ದೇವೆ. ಇದರಿಂದಾಗಿ ಜಗತ್ತಿನೆಲ್ಲೆಡೆ ನವೋದ್ಯಮಗಳಿಗೆ ಮತ್ತಷ್ಟು ಉಜ್ವಲ ಪರಿಸರವನ್ನು ಒದಗಿಸಲು ಸಾಧ್ಯವಾಗಲಿದೆ’’ ಎಂದಿದ್ದಾರೆ.

City Today News

(citytoday.media)

9342997936

“PUBLIC APPEAL” Attention Bengalurians! “In connection with Aero India Show 2019”

* GATE NO 1 2A 2B:Please KEEP LEFT on Internationa Airport flyover. At Yelahanka Airbase you will be diverted by Bengaluru Traffic Police towards your destination.,

*GATE NO 8 &9 (ADVA PARKING) Please KEEP LEFT on International Airport road flyover. You will be diverted by Bengaluru Traffic Police at Coffee-Day Junction towards your parking area.

*GATE NO-5 DOMESTIC PARKING) Please KEEP RIGHT on International Airport road flyover. You have to go ahead of Yalahanka Airbase and take a U TURN at Hunasamaranahalli underpass, thern KEEP LEFT to reach Gate No. 5.

*INTERNATIONAL AIRPORT Please KEEP RIGHT on International Airport Road (Fly Over)

*CONTRA TRAFFIC FLOW: On the International Flyover at Coffee-Day Junction Bengaluru Traffic Police are allowing traffic on both sides of the road towards International Airport. Please make use of this facility. Don’t stop vehicle at this point.

Bengaluru Traffic police at your service, please co-operate with it.

City Today News

(citytoday.media)

9341997936

Call for separate regulations for medical devices and OTC drugs 4th International Conference on Pharma & Medical Devices concludes

Thrust on data revolution in the pharmaceutical and medical device sector through AI
Mega event concludes with 500+ Indian and International trade visitors, CEOs’ participation and 250+ academicians and students

BENGALURU, 19 February 2019: The 4th International Conference on Pharmaceuticals and Medical Devices which concluded here today witnessed the participation of drug regulators from over 30 countries including Russia, Kenya, the UK, Malaysia, Indonesia, Saudi Arabia and Uzbekistan, along with participation of Indian drug regulators from 15 states.
The conference was organised by the Department of Pharmaceuticals, Ministry of Chemicals & Fertilizers and Government of India jointly with the Federation of Indian Chambers of Commerce & Industry (FICCI).

Some of the issues discussed at the CEOs roundtable included development of separate medical device and over-the-counter (OTC) drug regulations act, early decision on implementation of trade margin rationalization, addressing the issue of Active Pharmaceutical Ingredients (APIs) price escalation imported from China, incentivisation for innovation in the pharmaceutical and medical device sector, greater transparency in the functioning of National Pharmaceutical Pricing Authority (NPPA) and last but not the least, amendments by the Ministry of Consumer Affairs for allowing companies to utilise the mandatory CSR spending towards medicine donations into Jan Aushadhi or Ayushman Bharat scheme.

Knowledge sessions were focused towards promoting innovative ecosystem in India for pharmaceutical industry, interaction with State Drug Controllers and CDSCO for facilitating ease of doing business, initiatives for import registration procedure to enable faster access to global market for the industry, WHO activities and plans related to the regulation of health technologies and enabling the industry to gear up for Ayushman Bharat, the most aspirational health scheme rolled out by the government.

In his concluding remarks, Mr. Navdeep Rinwa, Joint Secretary, Department of Pharmaceutical, Government of India, mentioned how the government was prioritising the pharma and medical device sector in AI applications by bringing in task forces and other policies in place.

City Today News

(citytoday.media)

9341997936

” 33ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಜ್ಯ ಸರ್ಕಾರಕ್ಕೆ ಪಡಿತರ ವಿತಕರಿಂದ ಕೃತಜ್ಞತಾ ಸಮರ್ಪಣಾ ಸಮಾರಂಭ ಹಾಗೂ ರಾಜ್ಯ ಮಟ್ಟದ ಸಮ್ಮೇಳನ

ಸರ್ಕಾರಿ ಪಡಿತರ ವಿತರಕರ ” 33ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಜ್ಯ ಸರ್ಕಾರಕ್ಕೆ ಪಡಿತರ ವಿತಕರಿಂದ ಕೃತಜ್ಞತಾ ಸಮರ್ಪಣಾ ಸಮಾರಂಭ ಹಾಗೂ ರಾಜ್ಯ ಮಟ್ಟದ ಸಮ್ಮೇಳನ ದಿನಾಂಕ 16 – 02 – 2019ರ ಶನಿವಾರ ಸಮಯ : 10 – 30 ಗಂಟೆಗೆ ಸ್ಥಳ : ಫ್ರೀಡಂ ಪಾರ್ಕ್ ( ಸ್ವತಂತ್ರ್ಯ ಉದ್ಯಾನವನ ) , ಬೆಂಗಳೂರು . ಮಾನ್ಯ ನ್ಯಾಯಬೆಲೆ ಅಂಗಡಿ ಮಾಲೀಕರು , ವಿ . ಎಸ್ . ಎಸ್ . ಎನ್ . ಕಾರ್ಯದರ್ಶಿಗಳು ಹಾಗೂ ಸೀಮೆ ಎಣ್ಣೆ ವಿತರಕ ರವರೇ . . ರಾಜ್ಯಾದ್ಯಂತ ಎಲ್ಲಾ ಪಡಿತರ ವಿತರಕರು , ಸೀಮೆ ಎಣ್ಣೆ ವಿತರಕರು , ಅಮಾಲಿ ( ಕಾರ್ಮಿಕರು ) ಮತ್ತು ಲಾರಿ ಮಾಲೀಕರು ಭಾಗವಹಿಸಿ ತಮ್ಮ ಈ ಕೆಳಕಂಡ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸಕ್ರಿಯವಾಗಿ ಈ ಸಮಾವೇಶಕ್ಕೆ ಪಡಿತರ ವಿತರಕರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸತಕ್ಕದ್ದು . 1 ) ರಾಜ್ಯ ಸರ್ಕಾರಿ ಪಡಿತರ ವಿತರಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡುವುದು 2 ) ಸೆಪ್ಟೆಂಬರ್ 25 , 2018 ರಂದು ನವ ದೆಹಲಿ , ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಿಂಟಾಲ್‌ಗೆ 250 ರೂ . ಕಮೀಷನ್ ನೀಡಲು ಒತ್ತಾಯಿಸಲಾಯಿತು . 3 ) ಸಗಟು ಮಳಿಗೆಗಳಿಗೆ ಎಲೆಕ್ಟ್ರಾನಿಕ್ ಬಯೋ ಮೆಟ್ರಿಕ್ ಯಂತ್ರಗಳನ್ನು ಅಳವಡಿಸಿ ಸರಿಯಾದ ತೂಕವನ್ನು ಕೊಡಿಸುವುದು . 4 ) ನ್ಯಾಯಬೆಲೆ ಅಂಗಡಿ ಮಾಲೀಕರು ಮೃತ ಪಟ್ಟರೆ ಅವರ ಕುಟುಂಬದವರಿಗೆ ಪ್ರಾಧಿಕಾರ ನೀಡುವುದು . 5 ) ಬೇರೆ ರಾಜ್ಯಗಳಲ್ಲಿ ಕೊಡುತ್ತಿರುವ ಕಮೀಷನ್‌ನ್ನು ನಮ್ಮ ರಾಜ್ಯದಲ್ಲೂ ಕೊಡಿಸಿಕೊಡಬೇಕಾಗಿ ಮನವಿ .

ಉದ್ಘಾಟನೆ:

ಹೆಚ್ . ಡಿ . ಕುಮಾರಸ್ವಾಮಿರವರು , ಸನ್ಮಾನ್ಯ ಮುಖ್ಯಮಂತ್ರಿಗಳು

ಮುಖ್ಯ ಅತಿಥಿಗಳು:

ಸನ್ಮಾನಶ್ರೀ ರಾಮವಿಲಾಸ್ ಪಾಸ್ವಾನ್‌ರವರು

ಕೇಂದ್ರ ಸಚಿವರು , ಆಹಾರ ಮತ್ತು ಗ್ರಾಹಕರ ವ್ಯವಹಾರ

City Today News

(citytoday.media)

9341997936

ಕರ್ನಾಟಕ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ : ಎಸ್‌ಡಿಪಿಐ

ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಫೆಬ್ರವರಿ 8ರಂದು ಸದನದಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ . . ಜೆಡಿಎಸ್ – ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಅಭಿವೃದ್ಧಿ ಬಗ್ಗೆ ಶಿಫಾರಸ್ಸು ಮಾಡಿದ ಸಾಚಾರ್ ಮತ್ತು ಮಿಶ್ರಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿತ್ತು . ರಾಜ್ಯದಲ್ಲಿ ಅತೀ ಹಿಂದುಳಿದ ಜನಸಮುದಾಯವಾಗಿದೆ ಮುಸ್ಲಿಂ ಸಮುದಾಯ . ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಹಿಂದುಳಿದ ಮುಸ್ಲಿಮರು ಪ್ರಗತಿ ಸಾಧಿಸಬೇಕಾಗಿದೆ . ಈ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿತ್ತು . ಆದರೆ ಬಜೆಟ್‌ನಲ್ಲಿ ಯಾವುದೇ ವಿಶೇಷ ಹಣಕಾಸು ಮಂಜೂರು ಮಾಡದೆ ಸಮ್ಮಿಶ್ರ ಸರಕಾರ ಮುಸ್ಲಿಮರಿಗೆ ಮತ್ತೊಮ್ಮೆ ವಂಚಿಸಿದೆ . ಜಾತ್ಯಾತೀತ ಪಕ್ಷಗಳು ಅಧಿಕಾರಕ್ಕೆ ಬರಬೇಕು , ಬಿಜೆಪಿಯನ್ನು ಸೋಲಿಸಬೇಕು ಎಂದು ಮುಸ್ಲಿಮರು ಶೇಕಡಾ 95 % ಮತಗಳನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ನೀಡಿದ್ದವು . ಆದರೆ ಸಮ್ಮಿಶ್ರ ಸರಕಾರ ಮುಸ್ಲಿಂ ಮತದಾರರ ನಿರೀಕ್ಷೆಗಳನ್ನು ಹುಸಿ ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್‌ಡಿಪಿಐ ) ಪಕ್ಷ ಆರೋಪಿಸುತ್ತದೆ .

ರಾಜ್ಯದ ಒಟ್ಟು ಬಜೆಟ್ ಮೊತ್ತ 2ಲಕ್ಷ 34 ಸಾವಿರದ 153 ಕೋಟಿ ರೂಪಾಯಿಗಳ ಪೈಕಿ ಎಲ್ಲಾ ಅಲ್ಪಸಂಖ್ಯಾತ ಜನಸಮುದಾಯಗಳಿಗೆ ಕೇವಲ 1 ಸಾವಿರ ಕೋಟಿಗೂ ಕಡಿಮೆ ಹಣವನ್ನು ನೀಡಲಾಗಿದೆ . ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2 , 300 ಕೋಟಿ ರೂಪಾಯಿಗಳನ್ನು ನೀಡಿತ್ತು , ಅಲ್ಪಸಂಖ್ಯಾತ ಜನಸಮುದಾಯಗಳಾದ ಮುಸ್ಲಿಮ್ , ಕ್ರೈಸ್ತ , ಜೈನ್ , ಸಿಖ್ , ಪಾರ್ಸಿ , ಭೌದ್ದ ಒಟ್ಟು ಜನಸಂಖ್ಯೆಯು ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 20 % ಕ್ಕಿಂತ ಹೆಚ್ಚಿದೆ . ಈ ಸಣ್ಣ ಮೊತ್ತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಅಸಾಧ್ಯ . ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿ ನಾನು ಮುಖ್ಯಮಂತ್ರಿಯಾಗಿದ್ದರೆ ಅಲ್ಪಸಂಖ್ಯಾತರ ಋಣ ತೀರಿಸಲು ಕನಿಷ್ಠ 10ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದೆ ಎಂದಿದ್ದರು . ಎಸ್‌ಡಿಪಿಐ ಪಕ್ಷವು ಕಳೆದ 3 ವರ್ಷಗಳಿಂದ 10 ಸಾವಿರ ಕೋಟಿ ರೂಪಾಯಿ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಹೋರಾಡುತ್ತಿದೆ . ರಾಜ್ಯ ಸರಕಾರವು ಬಿಜೆಪಿ ಮತ್ತು ಕೋಮುವಾದಿ ಶಕ್ತಿಗಳ ಒತ್ತಡಕ್ಕೆ ಮಣಿದು ಈ ರೀತಿಯ ತಾರತಮ್ಯ ಮಾಡಿದೆ . ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳಿಗೆ ಅಲ್ಪಸಂಖ್ಯಾತರು ಬೆಂಬಲಿಸಬೇಕೆಂದಾದರೆ ಕೂಡಲೇ 10 ಸಾವಿರ ಕೋಟಿ ರೂಪಾಯಿ ಬಜೆಟ್ ನೀಡಿ ಆ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ಅಲ್ಪಸಂಖ್ಯಾತರ ವಿಶ್ವಾಸ ಗಳಿಸುವ ಕೆಲಸವಾಗಬೇಕೆಂದು ಎಂದು ಎಸ್‌ಡಿಪಿಐ ಒತ್ತಾಯಿಸುತ್ತದೆ . ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ , ಪತ್ರಿಕಾಗೋಷ್ಠಿ , ಸಭೆ ಸಮಾರಂಭ ಮಾಡಿ ಈ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹೇರಲು ತೀರ್ಮಾನಿಸಿದೆ . ರಾಜ್ಯದ ಎಲ್ಲಾ ಹಿಂದೂ , ಮುಸ್ಲಿಂ , ಕ್ರೈಸ್ತರೆಲ್ಲರೂ ಸೇರಿ ಅಲ್ಪಸಂಖ್ಯಾತರ ಹಕ್ಕು , ಸಾಮಾಜಿಕ ನ್ಯಾಯ ಕಲ್ಪನೆಯ ಈ ಸಂವಿಧಾನಬದ್ದ ಹೋರಾಟಕ್ಕೆ ಬೆಂಬಲ ನೀಡಬೇಕು . ಅಲ್ಪಸಂಖ್ಯಾತರ ಮತ ಪಡೆದು ಗೆದ್ದಿರುವ ಶಾಸಕರುಗಳು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಒತ್ತಡಹಾಕಿ ಅಲ್ಪಸಂಖ್ಯಾತರ ನ್ಯಾಯಬದ್ದ ಬೇಡಿಕೆಯನ್ನು ಈಡೇರಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ : ಅಬ್ದುಲ್ ಹನ್ನಾನ್ ( ರಾಜ್ಯ ಪ್ರಧಾನ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) ಅಪ್ಪರ್ ಕೊಡ್ಲಿಪೇಟೆ ( ರಾಜ್ಯ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) ಜಾವೀದ್ ಆಝಾಂ ( ರಾಜ್ಯ ಕೋಶಾಧಿಕಾರಿ , ಎಸ್‌ಡಿಪಿಐ ಕರ್ನಾಟಕ ) ಶರೀಫ್ ಬೆಂಗಳೂರು ( ಜಿಲ್ಲಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು ) ಹೆಚ್ . ಎಂ . ಗಂಗಪ್ಪ ( ಉಪಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು ) ಸಮಿ ಹಝುತ್ ( ರಾಜ್ಯ ಸಮಿತಿ ಸದಸ್ಯರು , ಎಸ್‌ಡಿಪಿಐ ಕರ್ನಾಟಕ ) ಫಯಾಝ್ ಅಹ್ಮದ್ ( ರಾಜ್ಯ ಸಮಿತಿ ಸದಸ್ಯರು , ಎಸ್‌ಡಿಪಿಐ ಕರ್ನಾಟಕ )

City Today News

(citytoday.media)

9341997936