‘ಹಳ್ಳಿ ಪವರ್’ ಗ್ರಾಂಡ್ ಫಿನಾಲೆ ಡಿಸೆಂಬರ್ 27–28ರಂದು ಜೀ ಪವರ್ನಲ್ಲಿ

ಬೆಂಗಳೂರು, ಡಿಸೆಂಬರ್ 25, 2025:
ಹೊಸ ಚಾನೆಲ್ ಜೀ ಪವರ್ ತನ್ನ ವಿಭಿನ್ನ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳ ಮೂಲಕ ಕಡಿಮೆ ಅವಧಿಯಲ್ಲೇ ವೀಕ್ಷಕರ ಮನಗೆದ್ದಿದೆ. ಅದರಲ್ಲೂ ಅಕುಲ್ ಬಾಲಾಜಿ ನಿರೂಪಣೆಯ ‘ಹಳ್ಳಿ ಪವರ್’ ರಿಯಾಲಿಟಿ ಶೋ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಬಹುನಿರೀಕ್ಷಿತ ಗ್ರ್ಯಾಂಡ್ ಫಿನಾಲೆ ಎಪಿಸೋಡ್ಗಳು ಡಿಸೆಂಬರ್ 27 ಮತ್ತು 28ರಂದು ರಾತ್ರಿ 8:30ರಿಂದ 10:30ರವರೆಗೆ ಜೀ ಪವರ್ ಚಾನೆಲ್ನಲ್ಲಿ ಪ್ರಸಾರವಾಗಲಿದ್ದು, ‘ಹಳ್ಳಿ ಪವರ್’ ಸೀಸನ್ 1ರ ವಿಜೇತೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
‘ಹಳ್ಳಿ ಪವರ್’ ಪರಿಕಲ್ಪನೆಯಲ್ಲೇ ವಿಭಿನ್ನವಾಗಿರುವ ರಿಯಾಲಿಟಿ ಶೋ. ನಗರ ಜೀವನದಲ್ಲಿ ಬೆಳೆದ ಯುವತಿಯರು ತಮ್ಮ ಆರಾಮದಾಯಕ ಸಿಟಿ ಲೈಫ್ ಅನ್ನು ಬಿಟ್ಟು ಹಳ್ಳಿಗೆ ಬಂದು ನಿಜವಾದ ಗ್ರಾಮೀಣ ಜೀವನವನ್ನು ಅನುಭವಿಸುವುದು ಈ ಶೋದ ಪ್ರಮುಖ ಅಂಶ. ಇಡೀ ಸೀಸನ್ನಲ್ಲಿ ಸ್ಪರ್ಧಿಗಳು ಕೃಷಿ, ಜಾನುವಾರುಗಳ ಪಾಲನೆ, ಮನೆಮಠದ ಕೆಲಸಗಳು ಸೇರಿದಂತೆ ಹಳ್ಳಿಯ ದಿನನಿತ್ಯದ ಬದುಕನ್ನು ಪ್ರತಿಬಿಂಬಿಸುವ ವಿವಿಧ ಟಾಸ್ಕ್ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜೊತೆಗೆ ಶಕ್ತಿಪರೀಕ್ಷೆ ಮಾಡುವ ಫಿಸಿಕಲ್ ಟಾಸ್ಕ್ಗಳು ಶೋಗೆ ಮತ್ತಷ್ಟು ರೋಚಕತೆಯನ್ನು ತಂದಿವೆ.
ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದ ಈ ರಿಯಾಲಿಟಿ ಶೋ ಹಳ್ಳಿ ಸೊಗಡು, ನೈಜತೆ ಮತ್ತು ಸಂಸ್ಕೃತಿಯನ್ನು ಮನಮುಟ್ಟುವ ರೀತಿಯಲ್ಲಿ ತೆರೆ ಮೇಲೆ ತಂದಿದೆ. ಅಕುಲ್ ಬಾಲಾಜಿ ಅವರ ಚುರುಕಾದ ನಿರೂಪಣೆ, ಸ್ಪರ್ಧಿಗಳ ಛಲ ಮತ್ತು ಹೋರಾಟದ ಮನೋಭಾವವೇ ‘ಹಳ್ಳಿ ಪವರ್’ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ.
ಈ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಮತ್ತು ಮಣ್ಣಿನ ಮಗಳು ಫರೀನ್ ಫಿನಾಲಿಸ್ಟ್ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢ ಸಂಕಲ್ಪವೇ ಅವರನ್ನು ಫಿನಾಲೆ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟ ಯಾರ ಮುಡಿಗೆ ಸೇರುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಭಾವನಾತ್ಮಕ ಕ್ಷಣಗಳು, ಉಸಿರುಗಟ್ಟಿಸುವ ಟಾಸ್ಕ್ಗಳು ಮತ್ತು ರೋಚಕ ತಿರುವುಗಳೊಂದಿಗೆ ‘ಹಳ್ಳಿ ಪವರ್’ ಗ್ರ್ಯಾಂಡ್ ಫಿನಾಲೆ ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
‘ಹಳ್ಳಿ ಪವರ್’ ಸೀಸನ್ 1ರ ವಿಜೇತ ಯಾರು ಎಂಬುದನ್ನು ತಿಳಿದುಕೊಳ್ಳಲು ಡಿಸೆಂಬರ್ 27 ಮತ್ತು 28ರಂದು ಸಂಜೆ 8:30ರಿಂದ ರಾತ್ರಿ 10:30ರವರೆಗೆ ಜೀ ಪವರ್ ಅನ್ನು ತಪ್ಪದೇ ವೀಕ್ಷಿಸಿ.
City Today News 9341997936





You must be logged in to post a comment.