ಅಣುವ್ರತ ಸಮಿತಿ  ಆಯೋಜಿಸಿರುವ ಸರ್ವಧರ್ಮ ಅಣುವ್ರತ ಬೃಹತ್ ಅಹಿಂಸಾ ರ್ರ್ಯಾಲಿ

ದಿನಾಂಕ : 4 – 7 – 2019 ಗುರುವಾರ

ಅಣುವ್ರತ ಸಮಿತಿ ಆಯೋಜಿಸಿರುವ ಸರ್ವಧರ್ಮ ಅಣುವ್ರತ ಬೃಹತ್ ಅಹಿಂಸಾ ರ್ರ್ಯಾಲಿ, ದಿನಾಂಕ : 7 ಜುಲೈ 2019 ರಂದು ಭಾನುವಾರ ಬೆಳಿಗ್ಗೆ 8 – 00 ಘಂಟೆ ಚಾಮರಾಜಪೇಟೆ ಆದರ್ಶ ಶಿಕ್ಷಣ ಸಂಸ್ಥೆಯಿಂದ – ಮರಾಠ ಹಾಸ್ಟೆಲ್‌ನವರೆಗೆ ಸಾರ್ವಜನಿಕ ಬಂಧುಗಳೇ , ಈ ಕರ ಪತ್ರದ ಮೂಲಕ ತಿಳಿಯಪಡಿಸುವುದೇನೆಂದರೆ , ರಾಷ್ಟ್ರ – ಸಂತ ಜೈನಾಚಾರ್ಯ ಆಚಾರ್ಯ ಶ್ರೀ ಮಹಾಶ್ರಮಣ್‌ಜೀರವರು ತಮ್ಮ ‘ ಅಹಿಂಸಾ – ಯಾತ್ರೆ ‘ ಯೊಂದಿಗೆ , ನೂರಾರು ಶಿಷ್ಯರೊಂದಿಗೆ ಕಾಲ್ನಡಿಗೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ . ದೇಶದ ಎಲ್ಲಾ ರಾಜ್ಯಗಳನ್ನು ಸಂಚರಿಸಿ ನಮ್ಮ ರಾಜ್ಯಕ್ಕೂ ಸಹ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ . ಇಲ್ಲಿಯವರೆಗೆ ಮೂರು ರಾಷ್ಟ್ರಗಳು ಮತ್ತು 16 ರಾಜ್ಯಗಳ ಸಂಚಾರ ಮುಗಿಸಿ ಸುಮಾರು 16 ಸಾವಿರಕ್ಕೂ ಹೆಚ್ಚು ಮೈಲಿಗಳಷ್ಟು ಕ್ರಮಿಸಿರುತ್ತಾರೆ . 50 ವರ್ಷಗಳ ನಂತರ ಮಹಾತಪಸ್ವಿಯೊಬ್ಬರು ರಾಜ್ಯಕ್ಕೆ ಆಗಮಿಸಿರುತ್ತಾರೆ . ಆಚಾರ್ಯ ಶ್ರೀ ತುಳಸಿಯವರು 1969ರಲ್ಲಿ ಬಂದಿದ್ದರು . ಪರಮ ತಪಸ್ವಿಗಳಾದ ಆಚಾರ್ಯರು ಬೆಂಗಳೂರಿನಲ್ಲಿ ಚಾತುರ್ಮಾಸ ಅನುಷ್ಠಾನವನ್ನು ನೆರವೇರಿಸಲಿದ್ದಾರೆ . ಬೆಂಗಳೂರು ಮಹಾಜನತೆಗೆ ಪೂಜ್ಯರು ಮೂರು ವಿಷಯಗಳನ್ನು ಪ್ರಮುಖವಾಗಿ ಮನವರಿಕೆ ಮಾಡಿ ಕೊಡಲಿದ್ದಾರೆ . 1 . ಸಪ್ತಾವನೆ 2 . ನೈತಿಕತೆ 3 . ನಶಾಮುಕ್ತಿ ಈ ವಿಚಾರಗಳನ್ನು ಜನರೊಂದಿಗೆ ಚರ್ಚಿಸಿ ನಮ್ಮ ಉತ್ತಮ ಭವಿಷ್ಯಕ್ಕಾಗಿ ಈ ವಿಷಯಗಳಲ್ಲಿ ಜಾಗೃತಿ ಮೂಡಿಸಿ ಶುಭಾಶೀರ್ವಾದವನ್ನು ಮಾಡಲಿದ್ದಾರೆ . ಬೆಂಗಳೂರಿನ ಅನೇಕ ಭಾಗಗಳಲ್ಲಿ ಪರಮಪೂಜ್ಯರು ಈಗಾಗಲೇ ತಮ್ಮ ಅಹಿಂಸಾ ಯಾತ್ರೆಯಲ್ಲಿ ಸಾಗಿ ಜನರಿಗೆ ದರ್ಶನ ಭಾಗ್ಯವನ್ನು ನೀಡಿದ್ದಾರೆ . ನಾವೆಲ್ಲರು ಒಂದೇ , ಭಾರತೀಯರು ಎಂಬ ಸದ್ಭಾವನೆಯ ವಾಕ್ಯವನ್ನು ತಮ್ಮ ಅಮೃತವಾಣಿಯಲ್ಲಿ ತಿಳಿಸಿದ್ದಾರೆ . ಅಂತೆಯೇ ನಮ್ಮ ಚಾಮರಾಜಪೇಟೆಯ ಮಧ್ಯದಲ್ಲಿ ಭಾನುವಾರದಂದು ತಮ್ಮ ಕಾಲ್ನಡಿಗೆಯಲ್ಲಿ ಶಿಷ್ಯರೊಂದಿಗೆ ಸಾಗಲಿದ್ದಾರೆ ಮತ್ತು ಮರಾಠ ಹಾಸ್ಟೆಲ್ಲಿನ ಆವರಣದಲ್ಲಿ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.