33% reservation be made for women candidates in the elections for office bearers and executive committee members of the Bangalore Bar Association

The High Court has issued a notice to the state government and the Bar Association regarding the issue of providing 33% reservation for women candidates in the upcoming elections for office bearers of the Bangalore Bar Association.

Advocate Deeksha N. Amrutesh’s petition on this matter was presented before Justice Suraj Govindaraj. After considering the arguments by senior advocate Lakshmi Iyengar, representing the petitioner, the bench issued notices to the respondents, including the state government, the Cooperative Department, the Registrar of Cooperative Societies, the Joint Registrar, the Karnataka Bar Council, and the Bangalore Bar Association.

The tenure of the current office bearers of the Bangalore Bar Association concluded on December 19, 2024, with elections scheduled for January or February 2025. On December 23, the petitioners, including the Bangalore Bar Association, filed a petition against the respondents, seeking the implementation of a 33% reservation for women candidates in the elections for office bearers and executive committee members, in compliance with the Supreme Court’s directive.

City Today News 9341997936

‘ರಾಯರ ಸನ್ನಿಧಿಗೆ ಭಕ್ತ ಜನ ಸಾಗರ” ಪ್ರಾತ:ಸ್ಮರಣೀಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ “ಆರಾಧನಾ “ಮಹೋತ್ಸವ

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ  ಶ್ರೀ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವು ವಿಶೇಷ ಉತ್ಸವಗಳೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ನೂತನ ವರ್ಷದ ಅಂಗವಾಗಿ  ನೂರಾರು ಭಕ್ತರು ಸನ್ನಿಧಿಗೆ ಆಗಮಿಸಿ, ಗುರುರಾಯರ ದರ್ಶನ ಪಡೆದು ಹುಗ್ಗಿ, ಪೊಂಗಲ್ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಪ್ರಜೆಗಳೆಲ್ಲರೂ ನೆಮ್ಮದಿಯಾಗಿ ಬದುಕಲು, ರಾಜ್ಯದ ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಸುವ್ಯವಸ್ಥೆ ತರಲು ಹಾಗೂ ದೇಶದ ಪ್ರಜೆಗಳು ಅನೈತಿಕತೆ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲು ಮುಂದಾಗಿ -ಎಲ್.ನಾಗರಾಜ್

ಪ್ರೆಸ್ ಕ್ಲಬ್ ನ ಸುದ್ದಿಗಾರರೊಂದಿಗೆ ಮಾತ ನಾಡಿದ ,ಸಂಚಾಲಕರು,ಸಮಾಜ ಸೇವಕರು ಎಲ್. ನಾಗರಾಜ್ ರವರು ಇದುವರೆಗೂ ಹತ್ತಾರು ಚುನಾವಣೆಯಲ್ಲಿ ಪ್ರಾಮಾಣಿಕತೆಯಿಂದ ಸ್ಪರ್ಧಿಸಿ 20,000 ಒಟ್ಟು ಮತ ಗಳಿಸಿ; ದೇಶದ ಹಾಗೂ ಜನಸೇವೆಯಲ್ಲಿ, ಅನೇಕ ಹೋರಾಟಗಳನ್ನು ಮಾಡಿ, ಜೈಲು ವಾಸವನ್ನೂ ಅನುಭವಿಸಿದ್ದೇನೆ” ಎಂದರು.

ಸಾಮಾಜಿಕ ಕಾರ್ಯಗಳಲ್ಲಿ ಈ ಇಳಿ ವಯಸ್ಸಿನಲ್ಲಿ “ಇಂದಿಗೂ; ಸ್ವತಃ ಧನ್ಯತೆ , ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಎಲ್ಲಾ ರಂಗಗಳಲ್ಲೂ ಪಾರದರ್ಶಕತೆ & ಅಭಿವೃದ್ಧಿ ತರಲು ಶ್ರಮಿಸುತ್ತಿರುವೆನು” ಎಂದು ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.
“ಇನ್ನಾದರೂ ನಾಯಕರು, ಅಧಿಕಾರಿಗಳು ಎಲ್ಲಾ ರಂಗಗಳಲ್ಲೂ ದುಂದು ವೆಚ್ಚ, ಅಪರಾಧ ಮಾಡದೇನೇ ದೇಶದ ಮತ್ತು ಪ್ರಜೆಗಳ ಸರ್ವತೋಮುಖ ಬೆಳವಣಿಗೆಗೆ, ಸಾರ್ವಜನಿಕರ ತೆರಿಗೆ ಹಣದ ಸದುಪ ಯೋಗಕ್ಕೆ – ಸೇವೆಗೆ ಶ್ರಮಿಸಲು” ಮನವಿ ಮಾಡಿ, ಕರೆ ನೀಡಿದ್ದಾರೆ.

City Today News 9341997936

ಅಂಬೇಡ್ಕರ್ ವಾದಿ ಹಿರಿಯ ಹೋರಾಟಗಾರ ಡಾ.ಎಂ.ಬೆಂಕಟಸ್ವಾಮಿ ಆಚರಿಗೆ 2025 ರ ‘ಭೀಮಸೇನಾನಿ’ಪ್ರಶಸ್ತಿ ಪ್ರಧಾನ

ದಿನಾಂಕ 01.01.2009 ರ ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಗಾಂಧಿನಗರ ಹೋಟೆಲ್ ಕಾನಿಷ್ಕ ಅಗೆ ಸಭಾಂಗಣದಲ್ಲಿ ಭೀಮಾ-ಕೊಡೇಂಗಾವ್ ವಿಜಯೋತ್ಸವ ಸಮಾರಂಭವನ್ನು ನಮ್ಮ ಸಂಘಟನೆ ಮತ್ತು ಮಿತ್ರ. ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ.

ನಾಡಿನ ಹಿರಿಯ ಅಂಬೇಡ್ಕರ್ ವಾದಿ ಮತ್ತು ಅಂಬೇಡ್ಕರ್ ಅವರೇ ಸಂಸ್ಥಾಪಿಸಿದ ನಾಲ್ಕು ಮಹಾ ಸಂಘಟನೆಗಳ ರಾಷ್ಟ್ರೀಯ ಮುಖಂಡರು ಮತ್ತು ಹೋರಾಟಗಾರರಾದ ಡಾ.ಎಂ.ವೆಂಕಟಸ್ವಾಮಿ ಅವರಿಗೆ ನಮ್ಮ ಸಂಘಟನೆಯು ಕೊಡಮಾಡುವ ಚೊಚ್ಚಲ ‘ಭೀಮಸೇನಾನಿ’ಪ್ರಶಸ್ತಿಯನ್ನು ಕೊಡಮಾಡುತ್ತಿದ್ದೇವೆ.ಕಳೆದ ನಲವತ್ತು ವರ್ಷಗಳಿಂದ ಸಮವಸ್ತ್ರಧಾರಿ ಸಮತಾ ಸೈನಿಕ ದಳ ಕಾರ್ಯಕರ್ತರನ್ನು ಪ್ರತಿವರ್ಷದ ಜನವರಿ 01ರಂದು ಪೂನಾ ನಗರಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಭೀಮಾ ಕೊರೇಂಗಾವ್ ಯುದ್ಧ ಸ್ಮಾರಕಕ್ಕೆ ಕರೆದುಕೊಂಡು ಹೋಗಿ ಅದರ ಇತಿಹಾಸ ಮತ್ತು ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುತ್ತಾ ಬಂದಿರುವ ಡಾ.ಎಂ.ವೆಂಕಟಸ್ವಾಮಿ ಅವರಿಗೆ ಈ ಪ್ರಶಸ್ತಿಯನ್ನು ಜನವರಿ 01ರ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಪ್ರಶಸ್ತಿಯು 10000 ನಗದು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಈ ಸಮಾರಂಭವನ್ನು ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತಾ ನಾಯಕ್ ಉದ್ಘಾಟಿಸುವರು. ಸಾಹಿತಿಗಳಾದ ಎನ್.ಜಿ.ಸಿದ್ದರಾಮಯ್ಯ,ಡಾ.ಮುಕುಂದರಾಜ್ ವಡ್ಡಗೆರೆ ನಾಗರಾಜಯ್ಯ, ಮುಂತಾದವರು ಮುಖ್ಯ ಅತಥಿಗಳಾಗಿ ಭಾಗವಹಿಸುವರು ಸಮತಾ ಸೈನಿಕ ದಳ,ದಲಿತ ಸಂರಕ್ಷ ಸಮಿತಿ, ಕರ್ನಾಟಕ ಭೀಮಸೇನೆ, ದಲಿತ ಟೈಗರ್ನ್,ಛಲವಾದಿ ಯುವ ಬ್ರಿಗೇಡ್ ಮುಂತಾದ ಮಿತ್ರ ಸಂಘಟನೆಗಳ ರಾಜ್ಯ ಮುಖಂಡರುಗಳು ಭಾಗವಹಿಸುವರು ಎಂದು ಕರ್ನಾಟಕ ಅಹಿಂದ ಹೋರಾಟ ಸಮಿತಿಯ ಮುಖಂಡರುಗಳಾದ ಡಾ. ಎಂ. ಮುತ್ತುರಾಜು, ಡಾ. ಆರ್. ಚಂದ್ರಶೇಖರ್, ಜಿ. ಅಂಜನಪ್ಪ, ಪ್ರದೀಪ್. ಹೆಚ್, ಎ. ಪಿ. ಸಂಪತ್ ಮತ್ತು ಇತರರ ಸಮ್ಮುಖದಲ್ಲಿ ತಿಳಿಸಲಾಯಿತು.

City Today News 9341997936

ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ರವರ ‘ಮೊಳಕೆ’ ಕೃತಿ ಬಿಡಗಡೆ

ಬೆಂಗಳೂರು;-ಸಾಹಿತ್ಯಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ,ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.
ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ  ಮತ್ತು ವಿಮರ್ಶೆಗಳ ಮಂಡನೆಯಿಂದ  ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ, ಆ ನಿಟ್ಟಿನಲ್ಲಿ ವಿನಮ್ರತೆಯಿಂದಲೇ ತುರುವನೂರು ಮಂಜುನಾಥ ಈ ಕೃತಿಯಲ್ಲಿ ವಿಷಯಮಂಡನೆ ಮಾಡುವ ಮೂಲಕ ಜನರಿಗೆ ನೇರವಾಗಿ ತಲುಪುವ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು
ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು ಆದರೆ ಇತ್ತೀಚಿನ ದಿನಗಳ ಅಂತ ವಾತಾವರಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಮೊಳಕೆ ಕೃತಿ ಯಾವುದೆ ವೈಚಾರಿಕ ಪಂಥಕ್ಕೆ ಸೇರದೆ ಉತ್ತಮವಾದದನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಆ ನಿಟ್ಟಿನಲ್ಲಿ ಜನಪರತೆಯ ಹಾದಿಯಲ್ಲಿ ಈ ಕೃತಿ ಗೆಲ್ಲುತ್ತದೆ ಎಂದು ವಿಶ್ಲೇಷಿಸಿದರು.
ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಪರಿಚಯಿಸಿರುವ ಅವರು ಉತ್ತಮ ವಿಮರ್ಶೆಯೊಂದನ್ನು ಮಂಡಿಸಿದ್ದಾರೆ ಹಾಗೆಯೇ ಗದ್ದರ್ ಕುರಿತಂತ,ಅವರ ಹೋರಾಟ ಮತ್ತು ಕೊನೆಕಾಲದ ಕುರಿತು ಅವರ ಜೀವಂತಿಕೆಯನ್ನು ಪ್ರಸ್ತಾಪ ಮಾಡಿದ್ದಾರೆ, ವ್ಯಕ್ತಿಚಿತ್ರಗಳಲ್ಲಿ ಉತ್ತಮವಾದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಂಜುನಾಥ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಕೃತಿಯಲ್ಲಿ ಮಂಜುನಾಥ ಅಂತರಾಳದ ಭಾವಗಳ ಕುರಿತು ಬರೆದಿರುವ ಕಾರಣ ಎದೆಗೆ ಬಿದ್ದ ಆ ಕ್ಷಣದ ಅಕ್ಷರಗಳ ಮತ್ತು ವಿಷಯಗಳನ್ನು ಉತ್ತಮವಾಗಿ ಪ್ರಸ್ತಾಪಿಸುವು ಮೂಲಕ ಒಂದು ವೈಚಾರಿಕ ಮನೋಭವಾದ ಹಿನ್ನಲೆಯಲ್ಲಿ ಬರದ ಕಾರಣ ಎಲ್ಲವೂ ಜನಪರ ಮತ್ತು ಜೀವಂತಿಕೆಯನ್ನು ಪಡೆದಿವೆ ಎಂದು ಹೇಳಿದರು.ಭಕ್ತಿ ಇರಬೇಕು ಆದರೆ ಫಂಥ ಸ್ಥಾಪಿದ ಧರ್ಮವ ಭಕ್ತಿಯ ಹೆಸರಿನಲ್ಲಿ ಮೂಡನಂಬಿಕೆ ಕಂದಾಚಾರಗಳನ್ನು ಸಮಾಜದಲ್ಲಿ ಹೇಗೆ ಶೋಷಣೆಗೊಳ್ಳುತ್ತದೆ ಎನ್ನವುದನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ, ಭಕ್ತಿಯ ಮೂಲ ಆಶಯವನ್ನು ತಿಳಿಸಲು ಹೊರಟಿರುವುದು ಒಂದು ವೈಚಾರಿಕೆ ನೆಲಗಟ್ಟಿನ ಹಿನ್ನಲೆಯಲ್ಲಿ ಇದು ಅತ್ಯಂತ ಮಹತ್ವ ಪಡೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮತನಾಡಿ ಪತ್ರಿಕೋದ್ಯಮದಲ್ಲಿ ಇಂದು ಸತ್ಯ ಅಸತ್ಯವಾಗಿಹೋಗಿದೆ. ಸತ್ಯದ ಹೆಸರಿನಲ್ಲಿ ಸುಳ್ಳುಗಳನ್ನು ರಾರಾಜಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇನ್ನೊಬ್ಬ ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ  ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ, ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಗುತ್ತಿದೆ ಎಂದು ವಿಷಾದಿಸಿದರು.
ಪತ್ರಕರ್ತರಾದವರ ಸ್ಥಿತಿ ಇಂದು ಶೋಚನಿಯವಾಗಿದೆ ಸುದ್ದಿಮನೆಯ ಮಾಲೀಕ ಹೇಳಿದ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುವುದರಿಂದ ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳುಗಳನ್ನು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು, ಇದರಿಂದ ಇಂದು ಮಾದ್ಯಮಗಳ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,ಪತ್ರಿಕೋದ್ಯಮದ ಸ್ಥಿತಿ ಶೋಚನೀಯವಾಗಿದೆ ಸೋಶಿಯಲ್ ಮೀಡಿಯಾ ಹಾವಳಿಯಿಂದ ಯಾರು ಪತ್ರಕರ್ತರು ಯಾರು ಅಲ್ಲ ಎನ್ನುವುದನ್ನು ಗುರುತಿಸಲು ಆಗದ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪತ್ರಿಕೆಗಳು ಒಂದು ಕಾಲದಲ್ಲಿ ಜಾಹೀರಾತು ಇಲ್ಲದೆ ಪ್ರಕಟವಾಗುತ್ತಿದ್ದವು ಆದರೆ ಈಗ ಜಾಹೀರಾತು ಇಲ್ಲದೆ ಪತ್ರಿಕೆಗಳು ನಡೆಯುವುದು ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ ಮತ್ತು ಮೊಳಕೆ ಕೃತಿಯ ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ,  ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್  ಹಾಜರಿದ್ದರು.

City Today News 9341997936