ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ    

ಪ್ರೆಸ್‍ಕ್ಲಬ್ ಆಫ್ ಬೆಂಗಳೂರು 2022ನೇ ಸಾಲಿನ ಪ್ರೆಸ್‍ಕ್ಲಬ್ ‘ವರ್ಷದ ವ್ಯಕ್ತಿ’ ಹಾಗೂ ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. 

ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಸನ್ಮಾನ್ಯ ಶ್ರೀ ಡಾ. ವಿ. ಗೋಪಾಲಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಶ್ರೀ ಮುರುಗೇಶ ನಿರಾಣಿ ಹಾಗೂ ಸಹಕಾರ ಸಚಿವ ಶ್ರೀ ಎಸ್.ಟಿ. ಸೋಮಶೇಖರ್ ರವರಿಗೆ ‘ವಿಶೇಷ ಪ್ರಶಸ್ತಿ’  ಪ್ರದಾನ ಮಾಡಿ ಗೌರವಿಸಲಾಯಿತು.

ಅದೇ ರೀತಿ 32 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‍ಕ್ಲಬ್ ‘ವಾರ್ಷಿಕ ಪ್ರಶಸ್ತಿ’ ನೀಡಲಾಯಿತು.

ಹೆಚ್.ಎಸ್. ಬಲರಾಂ
ಅಗ್ರಹಾರ ಕೃಷ್ಣಮೂರ್ತಿ 
ಗಂಗಾಧರ ಮೊದಲಿಯಾರ್
ಚೆನ್ನ ನಾಗರಾಜ್ ಎಂ.
ಶ್ರೀಧರ ಬಿ.ಎನ್
ಕಿರಣ್ ಹೆಚ್.ವಿ.
ಗೌತಮ್ ಮಾಚಯ್ಯ .ಎಂ
ರಾಜಶೇಖರ್ .ಎಸ್
ಹೆಚ್. ಮೂರ್ತಿ
ಸಂಗಮ್ ದೇವ್ ಐ.ಹೆಚ್
ಮುನೀರ್ ಅಹಮದ್ ಅಜದ್
ಕೆ.ವಿ. ಪರಮೇಶ್
ಸಿ.ಎಸ್. ಬೋಪಯ್ಯ
ಶ್ಯಾಂ ಬೋಜಕ್
ಭಾಗ್ಯ ಪ್ರಕಾಶ್ .ಕೆ
ಅನಿಲ್ ವಿ. ಗೆಜ್ಜೆ
ಶ್ರೀಮತಿ ಗಾಯಿತ್ರಿ ನಿವಾಸ್
ಬಸವರಾಜು 
ಹನುಮೇಶ್ ಯಾವಗಲ್
ಶಿವಣ್ಣ
ಶ್ರೀಮತಿ ಶೋಭಾ ಎಂ.ಸಿ
ದಿವಾಕರ್ .ಸಿ
ನಾಗಭೂಷಣ್ ವೈ.ಎಂ
ವಿಲಾಸ್ ನಂದೂಕರ್
ಇ ನಾಗರಾಜು
ಪಿ. ರಾಜೇಂದ್ರ
ಶಿವಾನಂದ ತಗಡೂರು ಟಿ.ವಿ.
ಶಿವಪ್ರಕಾಶ್ .ಎಸ್
ಓಂಕಾರ ಕಾಕಡೆ
ಜಯ ಪ್ರಕಾಶ್ .ಆರ್
ನರಸಿಂಹ ರಾವ್
ರಾಘವೇಂದ್ರ ಕೆ. (ತೋಗರ್ಸಿ)
ಗಿರಿಪ್ರಕಾಶ್ .ಕೆ

ಆರ್. ಶ್ರೀಧರ್ – ಅಧ್ಯಕ್ಷರು
ಬಿ.ಪಿ. ಮಲ್ಲಪ್ಪ  –  ಪ್ರಧಾನ ಕಾರ್ಯದರ್ಶಿ

City Today News – 9341997936

ಜನವರಿ 01: ಭೀಮಕೋರೆಗಾಂವ್ ವಿಜಯೋತ್ಸವ : ಸ್ವಾಭಿಮಾನಿ ಸಾಂಸ್ಕೃತಿಕ ಸಮಾವೇಶ

ಈ ನಮ್ಮ ಹೇಳಿಕೆಗೆ ಲಗತ್ತಿಸಿರುವ ಕರಪತ್ರದಲ್ಲಿನ ವಿವರಗಳು ಸ್ವಯಂವೇದ್ಯವಾಗಿವೆ. ಈ ದೇಶದಲ್ಲಿನ ಅಮಾನುಷ ಜಾತಿಪದ್ಧತಿಯಿಂದಾಗಿ ಭಾರತದ ಮೂಲನಿವಾಸಿ ಜನಾಂಗಗಳು ಹೇಗೆ ಅಸ್ಪೃಶ್ಯರಾದರು, ಶೂದ್ರರಾದರು ಎಂಬ (who were the untourchables and shudras?) ಅಂಬೇಡ್ಕರ್ ಅವರ ಸಂಶೋಧನಾ ಬರಹಗಳು ಇತಿಹಾಸದಲ್ಲಿನ ಅನೇಕ ಸತ್ಯಾಸತ್ಯ ಸಂಗತಿಯನ್ನು ಬಯಲುಮಾಡಿವೆ. ಇತಿಹಾಸದಲ್ಲಿ ಮರೆಮಾಚಿದ್ದ ದಲಿತ ಜನಾಂಗವೊಂದರ ವೀರೋಚಿತ ಯುದ್ಧದ ವಿಜಯವೇ `ಭೀಮಕೋರೆಗಾಂವ್ ವಿಜಯೋತ್ಸವ’. ಇದು ಮಾಮೂಲಿ ಕೇವಲ ಎರಡು ಸೇನೆಗಳ ನಡುವೆ ಯುದ್ಧವಾಗಿರದೆ ಶೋಷಕ ಆಡಳಿತದ ವಿರುದ್ಧ ಗುಲಾಮಗಿರಿಯಲ್ಲಿನ ಶೋಷಿತರು ತಮ್ಮ ಸೈನಿಕರ ದಂಗೆಯ ಮೂಲಕ ವಿಮೋಚನೆ ಪಡೆದಂತಹ ಮಹಾದಿನ. ಅದು ನಡೆದದ್ದು ಮಹಾರಾಷ್ಟ್ರಾದ ಪೂನಾ ನಗದ ಹತ್ತಿರದಲ್ಲಿನ ಭೀಮಾ ನದಿಯ ದಡದಲ್ಲಿರುವ ಕೋರೆಗಾಂವ್ ಗ್ರಾಮದ ಬಯಲಲ್ಲಿ, 1818ರ ಡಿಸೆಂಬರ್ 31ರ ಇಡೀ ರಾತ್ರಿ ಪೇಳ್ವೆ ಜನವರಿ ಮತ್ತು ಮಹಾರ್ ಸೈನಿಕರ ಮಧ್ಯೆ ಯುದ್ಧವು ನಡೆದು 1ರ ಬೆಳ್ಳಿಗ್ಗೆ ಬೆಳಕು ಹರಿಯುವುದರೊಳಗೆ ಪೇಳ್ವೆಗಳ ಸೈನ್ಯ ಸೋತು 2ನೇ ಬಾಜೀರಯ ಯುದ್ಧಜಾಗದಿಂದ ಓಡಿಹೋದ ಅಂದಿನ ಬ್ರಿಟಿಷರು ಈ ಯುದ್ಧದಲ್ಲಿ ಹುತಾತ್ಮರಾದ ವೀರ ಮಹಾರ್ ಸೈನಿಕರ ಸ್ಪರಣೆಗಾಗಿ ನಿರ್ಮಿಸದ ಸ್ತೂಪವೇ ಕೋರೆಗಾವ್‌ ವಿಜಯಸ್ಥಂಭ . ಇದನ್ನು ಅಂಬೇಡ್ಕರ್‌ರು ಬ್ರಿಟಿಷ್ ಲೈಬ್ರರಿಯ ಗ್ರಂಥದಲ್ಲಿ ಸಂಶೋಧಿಸಿ ಪ್ರತಿ ಜನವರಿ ಒಂದರಂದು ವಿಜಯಸ್ಥಂಭಕ್ಕೆ ಹೋಗಿ ನಮನ ಸಲ್ಲಿಸುತ್ತಿದ್ದರು. ಈ ಐತಿಹಾಸಿಕ ಸತ್ಯವನ್ನು ಬಾಬಾಸಾಬೇಬರು ತಮ್ಮ ಬರಹಗಳಲ್ಲಿ ಬರೆದಿದ್ದರಿಂದ ಇಂದು ಕೋಟ್ಯಾಂತರ ಅಂಬೇಡ್ಕರ್ ಅಭಿಮಾನಿಗಳು ಜನವರಿ ಒಂದರಂದು ಕೋರೆಗಾಂವ್‌ಗೆ ತೆರಳಿ ಭೀವನಮನಗಳನ್ನು ಸಲ್ಲಿಸುತ್ತಾರೆ.

ಈ ಹಿಲ್ಲೆಯಲ್ಲಿ ಈ ದಿನವನ್ನು ಸ್ವಾಭಿಮಾನಿ ಸಾಂಸ್ಕೃತಿಕ ಸಮಾವೇಶದ ಹೆಸರಿನಲ್ಲಿ 01.01.2022ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿದೆ. ದಲಿತ ಸಂಘಟನೆಗಳ ಒಂಟಿ ಆಶ್ರಯದಲ್ಲಿ ನಡೆಯುವ ಈ ಸಮಾವೇಶವನ್ನು ಅಗ್ನಿ ಶ್ರೀಧರ್ ಉದ್ಘಾಟಿಸುವರು. ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರು ಮುಖ್ಯ ಭಾಷಣ ಮಾಡುವರು. ಐ.ಪಿ.ಎಸ್.ಅಧಿಕಾರಿ ರವಿ ಚನ್ನಣ್ಣನವರ ಅವರು ಬರಹಗಾರ ವಿಠಲ್ ವಗ್ಗನ್ ರವರ ಸಂಶೋಧನಾ ಗ್ರಂಥ ‘ಭೀಮ ಕೋರೆಗಾಂವ್ ಮಹಾಯುದ್ಧ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವರು. ದಸಂಸದ ಅಶ್ವಥ್ ಅಂತೇಜ್ಯ ಅಧ್ಯಕ್ಷತೆ ವಹಿಸುವರು. ಚಿಂತಕ ಸುರೇಶ್ ಗೌತಮ್ ಆಶಯ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9.30ಕ್ಕೆ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲರ್ಪಣೆ ಮಾಡಿ ಸಾಂಸ್ಕೃತಿಕ ತಂಡಗಳೊಂದಿಗೆ ಭೀಮಕೋರೇಗಾಂವ್ ವಿಜಯಸ್ಥಂಭದ ರಥದ ಮೆರವಣಿಗೆಯನ್ನು ಟೌನ್‌ಹಾಲ್‌ವೆರಗೂ ನಡೆಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿನ 5 ಸಾಧಕರಿಗೆ `ಭೀಮಸೇನಾನಿ’ ಪ್ರಶಸ್ತಿಕೊಡಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಅಶ್ವಥ್ ಅಂತೇಜ- ದಸಂಸ ಸಂಯೋಜಕರು , .ಅರ್.ಚಂದ್ರಶೇಖರ್ – ನಗರ ಜಿಲ್ಲಾ ಅಧ್ಯಕ್ಷರು, ಹಾಗೂ ನಾರಾಯಣ ಧಾಸ್ – ರಾಜ್ಯ ದಸಂಸ ಸಂಯೋಜಕರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

City Today News – 9341997936

ಎಸ್ಸೆಸ್ಸೆಫ್‌ ಸದಸ್ಯತ್ವ ಅಭಿಯಾನ ಜನವರಿ ಒಂದರಿಂದ ಆರಂಭ

ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ಸುನ್ನೀ ಸೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023 ಜನವರಿ 01 ರಿಂದ 10 ರ ತನಕ ರಾಜ್ಯಾದ್ಯಂತ ನಡೆಯಲಿದೆ. ಎಸ್ಸೆಸ್ಸೆಫ್ ಕರ್ನಾಟಕದ ಮಣ್ಣಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಚುರುಕಿನ ಕಾರ್ಯಾಚರಣೆ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ಈ ನಾಡಿಗೆ ಸಮರ್ಪಿಸಿದೆ.

ಈ ಕಲುಷಿತಗೊಂಡಿರುವ ವಾತಾವರಣದಲ್ಲಿ ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಧಾರ್ಮಿಕತೆ, ನೈತಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ತುಂಬಿ ಸಮಾಜದ ಸತ್ಪಜೆಗಳನ್ನಾಗಿ ಮಾಡುವಲ್ಲಿ ಎಸ್ಸೆಸ್ಸೆಫ ಯಶಸ್ವಿಯಾಗಿದೆ. ರಾಷ್ಟ್ರದಾದ್ಯಂತ ಕಾರ್ಯಾಚರಿಸುತ್ತಿರುವ ಈ ಸಂಘಟನೆಗೆ ಇದೀಗ ಐದು ದಶಕಗಳು ತುಂಬ ಸುವರ್ಣ ಮಹೋತ್ಸವ ಆಚರಣೆಯಲ್ಲಿದೆ.

ಕರ್ನಾಟಕ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟವಾದ ಎಸ್ಸೆಸ್ಸೆಫ್, ಯುವಜನ ಒಕ್ಕೂಟವಾದ ಎಸ್.ವೈ.ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಮೂರು ಸಂಘಟನೆಗಳು ಸಂಯುಕ್ತವಾಗಿ ಸದಸ್ಯತ್ವ ಅಭಿಯಾನ ನಡೆಸಲಿದೆ.

“ವ್ಯರ್ಥವಾಗದಿರಲಿ ಯೌವ್ವನ” ಎಂಬ ಧೈಯ ವಾಕ್ಯದಡಿ ಎಸ್.ಎಸ್.ಎಫ್ 12 ವಯಸ್ಸಿನಿಂದ 32 ವಯಸ್ಸಿನವರೆಗೆ ಇರುವ, ಸಂಘಟನೆಯ ತತ್ವ ಸಿದ್ಧಾಂತಗಳಲ್ಲಿ ಬದ್ಧರಾದ ವಿದ್ಯಾರ್ಥಿಗಳು, ಯುವಕರು ಸಂಘಟನೆಯ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ.

ಹನ್ನೆರಡು ವಯಸ್ಸಿನಿಂದ ಮೂವತ್ತೆರಡು ವಯಸ್ಸು ಪ್ರಾಯ ಮಿತಿಯಲ್ಲಿರುವ ಸುನ್ನೀ ಯುವಕರು ಈ ಅವಧಿಯಲ್ಲಿ ಸದಸ್ಯತ್ವ ಪಡೆದು ಮುಂದಿನ ದಿನಗಳಲ್ಲಿ ನಾಡಿಗೂ, ಕುಟುಂಬಕ್ಕೂ, ರಾಷ್ಟ್ರಕ್ಕೂ ಬೆನ್ನೆಲುಬಾಗಿ ನಿಲ್ಲುವ ಪ್ರಜೆಗಳಾಗಬೇಕಿದೆ ಎಂದು ಎಸ್ಸೆಸ್ಸೆಫ್‌ ರಾಜ್ಯ ಅಧ್ಯಕ್ಷರಾದ ಅಬ್ದುಲ್‌ ಲತೀಫ್ ಸಅದಿ ಶಿವಮೊಗ್ಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಹಾಫಿಝ್ ಸುಫಿಯಾನ್ ಸಖಾಫಿ, ಕೊಪ್ಪಳ (ಫಿನಾನ್ಸ್ ಸೆಕ್ರೆಟರಿ, ಎಸ್ಸೆಸ್ಸೆಫ್‌ ಕರ್ನಾಟಕ ರಾಜ್ಯ), ಶಾಫಿ ಸಅದಿ ಬೆಂಗಳೂರು (ಸದಸ್ಯರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ), ಶಬೀಬ್ ಎ.ವಿ ಬೆಂಗಳೂರು (ಪ್ರಧಾನ ಕಾರ್ಯದರ್ಶಿ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ) ,ಹಾಗೂ ಸಾಧಿಕ್, ಜಿಲ್ಲಾ ಕಾರ್ಯಧರ್ಶಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.

For further details contact:9945756676.

City Today News – 9341997936

ಜನವರಿ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ “ಹುಲಿಕಲ್ ನಟರಾಜ್ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥ ಬಿಡುಗಡೆ.”

ಜನವರಿ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ

ಡಾ.ಹುಲಿಕಲ್ ನಟರಾಜ್ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥ ಬಿಡುಗಡೆ

ಬೆಂಗಳೂರು : ಡಿ-3)/ವೈಚಾರಿಕ ಹಾಗೂ ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಅವರಿಗೆ 10 ವರ್ಷದ ತುಂಬಿದ ಈ ಸಂದರ್ಭದಲ್ಲಿ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥವನ್ನು ಜನವರಿ 4ರಂದು ಬುಧವಾರ ಬೆಳಗ್ಗೆ 10ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇದರ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಚಿಕ್ಕಹನುಮಂತೇಗೌಡ ಹೇಳಿದರು.

ಅವರು ಇಂದು ಇಲ್ಲಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಲಿಕಲ್‌ ನಟರಾಜ್ ಕುರಿತಾಗಿ ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಚಿಂತಕರು ಬರೆದ ಲೇಖನಗಳನ್ನು ಸಂಗ್ರಹಿಸಿ “ಹುಲಿಹೆಜ್ಜೆ” ಎನ್ನುವ ಅಭಿನಂದನ ಗ್ರಂಥವನ್ನು ಹೊರತರಲಾಗಿದೆ. ಇಂದು ಬೆಳಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮಿಜಿಯವರು ವಹಿಸಲಿದ್ದು, ಖ್ಯಾತ ವಿಜ್ಞಾನಿ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ.ಎ.ಎಸ್.ಕಿರಣ್‌ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗಡೆಯವರು “ಹುಲಿಹೆಜ್ಜೆ’ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ಹೆಸರಾಂತ ಸಾಹಿತಿ ಡಾ.ಕುಂ.ವೀರಭದ್ರಪ್ಪನವರು ಗ್ರಂಥಕುರಿತು ಮಾತನಾಡಲಿದ್ದಾರೆ. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಹುಲಿಕಲ್ (1) ಕಿರುಚಿತ್ರ ಬಿಡುಗಡೆ ಮಾಡುವರು, ಗ್ರಂಥದ ಸಂಪಾದಕ ವಿ.ಟಿ.ಸ್ವಾಮಿ ದಿಕ್ಕೂಚಿ ಮಾತುಗಳನ್ನಾಡುವರು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖ‌ ಹುಲಿಕಲ್ ನಟರಾಜ್ ಅವರ ಕುರಿತು. ಅಭಿನಂದಿಸಲಿದ್ದಾರೆ, ವೇದಿಕೆಯಲ್ಲಿ ಡಾ.ಹುಲಿಕಲ್ ನಟರಾಜ್‌, ಪ್ರಜಾಪ್ರಗತಿ ಎಸ್‌.ನಾಗಣ್ಣ, ಪವರ್‌ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ವಿಸ್ತಾರ ಟಿ.ವಿಯ ಧರ್ಮೇಶ್, ರಾಜ್ ಟಿವಿಯ ಅರವಿಂದ್ ಸಾಗರ್, ವಿಜಯ ಟೈಮ್ಸ್ ನ ವಿಜಯಲಕ್ಷ್ಮೀ ಶಿಬರೂರು, ಪ್ರಮುಖರಾದ ವಿನಯಗೌಡ, ಡಾ.ಅಂಜನಪ್ಪ, ವೈ.ಎನ್.ಶಂಕರ್ ಗೌಡ, ಎಸ್.ಕೆ.ಉಮೇಶ್, ಪ್ರದೀಪ್ ಈಶ್ವರ್, ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಭರಣ ವಹಿಸಿಕೊಳ್ಳಲಿದ್ದಾರೆ.

ಈ ಒಂದು ದಿನದ ಕಾರ್ಯಕ್ರಮದಲ್ಲಿ ಹಲವು ಗೋಷ್ಠಿಗಳನ್ನು ಏರ್ಪಡಿಸಿದ್ದು ಮಧ್ಯಾಹ್ನ 2 ಗಂಟೆಗೆ ಸಾಮಾಜಿಕ ಚಿಂತನೆ ಮತ್ತು ಹುಲಿಕಲ್ ಏರ್ಪಡಿಸಿರುವ ಗೋಷ್ಠಿಯಲ್ಲಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷರಾದ ಡಾ.ಜಿ.ಎಸ್‌.ಶ್ರೀಧರ್ ಅವರು ಅಧ್ಯಕ್ಷತೆ ವಹಿಸಿಲಿದ್ದು, ವೇದಿಕೆಯಲ್ಲಿ ಪ್ರಧಾನ ಮಂತ್ರಿ ಕಚೇರಿಯ ಉಪಕಾರ್ಯದರ್ಶಿ ಡಾ.ಕಾರ್ತಿಕ್ ಹೆಗಡೆ ಕಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ರೂಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ.ಕೆ.ಎನ್.ಅನುರಾಧ, ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳಾದ ಗಂಗೂಬಾಯಿ ಮಾನಕ‌, ಕೆ.ಎ.ದಯಾನಂದ, ಡಾ.ಹೆಚ್.ನಟರಾಜ್, ಡಾ.ಸತೀಶ್ ಕುಮಾರ್ ಹೊಸಮನಿ, ಕಾಂತಾರ ಚಿತ್ರದ ನಾಯಕ ನಟಿ ಕುಮಾರಿ ಸಪ್ತಮಿ ಗೌಡ, ಜಿ.ಎಸ್.ರಾಜಶೇಖರಯ್ಯ, ಕೆ.ಜಿ.ರಾವ್, ಹಂಪಿಕೆಗೆ ರಾಜೇಂದ್ರ, ಆರ್.ಬಿಳೆಶಿವಾಲೆ, ಮೊದಲಾದವರು ಉಪಸ್ಥಿತರಿರುವರು.

ಸಂಜೆ 4ಗಂಟೆಗೆ ನಡೆಯುವ ಹುಲಿಹೆಜ್ಜೆ” ಅಭಿನಂದನ ಗ್ರಂಥದ ಸಂವಾದದಲ್ಲಿ ಕುವಿವಿ ಕುಲಪತಿಗಳಾದ ಪ್ರೋ.ಬಿ.ಪಿ ವೀರಭದ್ರಪ್ಪ ವಿಷಯ ಮಂಡಿಸಲಿದ್ದಾರೆ, ಮಾಜಿ ಸಚಿವರಾದ ಎಸ್.ಕೆ.ಕಾಂತಾ ಅಧ್ಯಕ್ಷತೆ ವಹಿಸುವರು, ಈ ಸಂದರ್ಭದಲ್ಲಿ, ಡಾ.ಸಿ.ಆರ್.ಚಂದ್ರಶೇಖರ್, ಸಾಹಿತಿ, ಬಿ.ಟಿ.ಲಿಲತಾ ನಾಯಕ್, ಡಾ.ಕೆ.ಷರೀಫಾ ಡಾ.ಮೈತ್ರಿಣಿ, ಗದಿಗೆಪ್ಪಗೌಡ‌, ದ.ರಾ.ಪುರೋಹಿ೮ ಕೆ.ವೆಂಕಟೇಶ್, ಡಾ.ಎಸ್.ಮಂಗಳಮೂರ್ತಿ, ತಿಪಟೂರು ಸಿ.ಶಿವಲಿಂಗಯ್ಯ, ಡಾ.ಹೆಚ್.ಎನ್.ತೇಜಯತಿನ್, ಕೆ.ಪಿ.ಲಕ್ಷ್ಮೀನಾರಾಯಣ, ಬಿ.ಎಂ.ಇರ್ಷಾದ್ ಉಪಸ್ಥಿತರಿರುವರು. ಅಹಮದ್, ಎಂ.ಕೆ.ಶ್ರೀನಿವಾಸರೆಡ್ಡಿ, ಕೆ.ಎನ್.ವೆಂಕಟೇಶ್, ಹಾಗೂ ಮೊದಲಾದವರು.

ಈ ದಿನ ಬೆಳಗ್ಗೆ 9.30ಕ್ಕೆ ಕುಮಾರಿ ಕೃತಿಕ, ತನುಶ್ರೀ, ದೀಪ್ತಿ ಸಂತೋಷ್, ಜಾನಪದ ಸೊಗಡು ರೇಣುಕಾ ಪ್ರಸಾದ್‌ ಮುಂತಾದವರು ಸುಗಮ ಸಂಗೀತಾ ಕಾರ್ಯಕ್ರಮವನ್ನು ನಡೆಸಿಕೊಡುವರು ಹಾಗೂ ಸಂಜೆ 6ಕ್ಕೆ ಇಂದುಮತಿ ಸಾಲಿಮಠ ಇವರಿಂದ ಹಾಸ್ಯಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರು, ಡಾ.ಹುಲಿಕಲ್ ನಟರಾಜ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ, ಹುಲಿಹೆಜ್ಜೆ ಗ್ರಂಥ ಸಂಪಾದಕ ವಿ.ಟಿ.ಸ್ವಾಮಿ, ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಮುಖರಾದ ಡಾ.ಶ್ರೀರಾಮಚಂದ್ರ ಕೆ.ಜೆ.ರಾವ್‌, ಹಂಪಿಕೆರೆ ರಾಜೇಂದ್ರ, ಇರ್ಷಾದ್ ಅಹಮದ್, ಡಾ.ಆನಂದಕುಲಕರ್ಣಿ, ಬಿ.ಡಿ.ರವಿಕುಮಾರ್, ಬಿ.ಸುರೇಶ್, ಮೊದಲಾದವರು ಉಪಸ್ಥಿತರಿದ್ದರು.

City Today News – 9341997936

BMCH-KENT Online Academics 2023

“When written in Chinese, the word ‘crisis’ is composed of two characters – one represents danger and the other represents opportunity,” said one of the greatest American statesmen, John F. Kennedy. While Covid-19 pandemic drove us inside and deprived many of offline learning and teaching, it provided us a great opportunity for online learning. I personally had an opportunity to conduct and teach in more than 25 webinars to general and specific peer groups. Now, while we prepare ourselves for offline courses, we are staring at another wave of the pandemic. Nevertheless, the show must go on. I am willing to repeat following online courses for interested colleagues. Here is the list of courses we conducted. Duration of these courses varies anywhere from 5 to 30 hours, done on a weekly basis.

List of webinar topics

· HRCT Temporal bone
· PNS Imaging
· Imaging for Skull base surgery – 360’ around the skull base
· Imaging of Neck for Otorhinolaryngologists
· Otology Ninja – All ontological topics
· Vertigo simplified
· Presentation and public speaking skills for doctors
· Hospital Management System
· In-depth Temporal bone anatomy
· Automate – automating writing research publications
· Understanding Electrophysiological tests for CI
· 101 Must know presentation skills for doctors
· Zero to Hero – A motivational and personality development program for doctors
· Neurolinguistic programming made easy
· Digital Signal processing
· Financial and management accounting
· Exploiting Cochlear compression
· Strategic cost management
· Business statistics and business analysis
· Excel in Biostatistics with Excel
· Art and science of CI Speech processing strategies and their implementation
· Breathing right for body and mind
· Breathe spiritually, Breathe scientifically
· Breathe right for success and fulfilment

Interested colleagues can either mail me or PM me on WhatsApp, if you are interested in any of the following topics. If we get enough numbers, we will repeat those courses again.

Prof. Dr. Prahlada N.B
+91-9342310854
prahladnb@gmail.com

City Today News – 9341997936